ಮದ್ಯ ಮಾರಾಟ, ಆರೋಪಿ ಬಂಧನ

ಕೊಕಟನೂರ: ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮದ್ಯದ ಬಾಟಲ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮದ ರಮೇಶ ಅಪ್ಪಾಸಾಬ ಬಿಳ್ಳೂರ (48) ಬಂಧಿತ ಆರೋಪಿ. ಬಾಟಲ್‌ಗಳನ್ನು ಕೈಚೀಲದಲ್ಲಿ ಇಟ್ಟುಕೊಂಡು ಸಾರ್ವಜನಿಕ ಸ್ಥಳಕ್ಕೆ ಆಗಮಿಸಿ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ.

ವಿವಿಧ ಬ್ರ್ಯಾಂಡ್‌ನ ಸುಮಾರು 40 ಟೆಟ್ರಾ ಪ್ಯಾಕ್ ವಶಪಡಿಸಿಕೊಂಡಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ರಾಕೇಶ ಬಗಲಿ, ಮಹಾಂತೇಶ ಖೋತ, ರಮೇಶ ಕೊಣ್ಣೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *