ಕುಡಿಯಲು ಪತ್ನಿ ಹಣ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿ ನೇಣಿಗೆ ಶರಣು

ಮೈಸೂರು: ಮದ್ಯಪಾನ ಸೇವನೆಗೆ ಪತ್ನಿ ಹಣ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಪೂಜಿ ನಗರದಲ್ಲಿ ಶುಕ್ರವಾರ ನಡೆದಿದೆ.

ಮಲ್ಲೇಶ್ (೪೫)ಮೃತ ದುರ್ದೈವಿ. ಕುಡಿತದ ದಾಸನಾಗಿದ್ದ ಮಲ್ಲೇಶ್​ ದಿನಾಲೂ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ. ಪತಿಯ ಕಾಟ ತಾಳಲಾರದೇ ಈ ಹಿಂದೆ ಹಲವು ಬಾರಿ ಹಣ ಕೊಟ್ಟು ಪತ್ನಿ ಸಹಕರಿಸಿದ್ದಳು. ಆದರೆ, ಇಂದು ಹಣ ನೀಡಲು ನಿರಾಕರಿಸಿದ್ದಕ್ಕೆ ಮನನೊಂದು ನೇಣುಬಿಗಿದುಕೊಂಡಿದ್ದಾನೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)