ಅಳವಂಡಿ: ಮನುಷ್ಯನಿಗೆ ಸಂಸ್ಕಾರ ಇಲ್ಲದಿದ್ದರೆ ಬದುಕು ವ್ಯರ್ಥ ಎಂದು ಅಳವಂಡಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮದ ಅನ್ನದಾನೀಶ್ವರ ಮಠದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಹಣ ಅಧಿಕಾರ ಶಾಶ್ವತವಲ್ಲ. ಧರ್ಮದ ಕಾರ್ಯಗಳೆ ಶಾಶ್ವತ. ಹಣದ ಶ್ರೀಮಂತಿಕೆಗಿಂತ, ಸಂಸ್ಕಾರ ಶ್ರೀಮಂತಿಕೆ ದೊಡ್ಡದು ಎಂದರು.
ಉದ್ಯಮಿ ಸದಣ್ಣ (ವೀರಭದ್ರಪ್ಪ) ಬಳ್ಳೊಳ್ಳಿ ಮಾತನಾಡಿದರು. ಪ್ರವಚನಕಾರ ಕುಮಾರಸ್ವಾಮಿ ತೋಳಲಿ, ಸಂಗೀತಗಾರಾದ ಬಸವರಾಜ ಹುಯಿಳಗೋಳ, ವೆಂಕರೆಡ್ಡಿ ಕವಲೂರು, ಕುಕನೂರಿನ ಮಹಾದೇವ ಸ್ವಾಮೀಜಿ, ಅನ್ನದಾನಸ್ವಾಮಿ ಸಾಲಿಮಠ, ಶ್ರೀನಿವಾಸ ಪಾತ್ರದ ಪ್ರಮುಖರಾದ ಪರಮೇಶಪ್ಪ ಕಂಚಿ, ಜಗದೀಶ ಗುಳದಳ್ಳಿ, ಶರಣಪ್ಪ ಗುಳದಳ್ಳಿ, ಶಂಕ್ರಪ್ಪ ಮತ್ತೂರು, ಕೆಂಚಪ್ಪ ತಳವಾರ ಇತರರಿದ್ದರು.