More

  ದೂರದೃಷ್ಟಿ-ವ್ಯಾಪಾರ ಅಭಿವೃದ್ದಿ ತರಬೇತಿ ಶಿಬಿರ

  ​ಅಳವಂಡಿ: ಭೈರಾಪುರ ಗ್ರಾಮದ ಶ್ರೀರಾಮ ಮಂದಿರದಲ್ಲಿ ಜಿಪಂ ಕೊಪ್ಪಳ, ತಾಪಂ ಕೊಪ್ಪಳ, ಗ್ರಾಮ ಪಂಚಾಯಿತಿ ಬೋಚನಹಳ್ಳಿ ಜಂಟಿಯಾಗಿ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಿಳೆಯರಿಗೆ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ದಿ ತರಬೇತಿ ಶಿಬಿರ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

  ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಬ್ಬರ ನಿಗೂಢ ಸಾವು: ಬಯಲಾಯ್ತು ಹಾಸ್ಟೆಲ್​ ವಾರ್ಡನ್ ಅಕ್ರಮ​ ರಹಸ್ಯ

  ಸಂಪನ್ಮೂಲ ವ್ಯಕ್ತಿ ಪದ್ಮಾ ಕಾತರಕಿ ಅವರು ಮಹಿಳೆಯರಿಗೆ ಆರೋಗ್ಯ, ಮೂಲ ಸೌಕರ್ಯ, ಸ್ವಚ್ಛ ಪರಿಸರ, ಶಿಕ್ಷಣ, ಪರಿಸರ ಕೃಷಿ, ವ್ಯಾಪಾರ ಅಭಿವೃದ್ಧಿ, ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ದಿ ಹೊಂದುವ ಅನೇಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
  ಒಕ್ಕೂಟದ ಅಧ್ಯಕ್ಷೆ ಸರೋಜಾ ಕಲ್ಲಳ್ಳಿ, ಉಪಾಧ್ಯಕ್ಷೆ ಚನ್ನಮ್ಮ, ಎಂಬಿಕೆ ವನಜಾಕ್ಷಿ ಸಸಿಮಠ, ಎಲ್‌ಸಿಆರ್‌ಪಿ ಭುವನೇಶ್ವರಿ, ವಿಜಯಲಕ್ಷ್ಮೀ, ಕೃಷಿ ಸಖಿ ರತ್ನಾ, ಪಶು ಸಖಿ ಸಾವಿತ್ರಿ, ರೇಖಾ ಹಾಗೂ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts