ಅಳವಂಡಿ: ಎಲ್ಲರೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ ಮೇಟಿ ಹೇಳಿದರು.
ಸಮೀಪದ ಬೈರಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಬೋಚನಹಳ್ಳಿ, ಜಿಲ್ಲಾ ಪಂಚಾಯಿತಿ, ತಾಲೂಕಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಮಕ್ಕಳ ಹಕ್ಕುಗಳನ್ನು ಎಲ್ಲರೂ ಗೌರವಿಸಬೇಕು, ಪಾಲಿಸಬೇಕು ಹಾಗೂ ಜಾರಿಗೊಳಿಸಬೇಕು. ಅವರಿಗೆ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಎಂದರು.
ಅಂಗನವಾಡಿ ಮೇಲ್ವಿಚಾರಕಿ ರೆಹಮತ್‌ಬೀ ಮಾತನಾಡಿದರು. ಎಸ್‌ಡಿಎಮ್‌ಸಿ ಅಧ್ಯಕ್ಷ ಯಲ್ಲಪ್ಪ ಹರ್ನಾಳಗಿ, ಪಿಡಿಒ ವಾಗೀಶ, ಕಾರ್ಯದರ್ಶಿ ಅಕ್ಬರ, ಸಿಆರ್‌ಪಿ ವಿಜಯಕುಮಾರ ಟಿಕಾರೆ, ಮುಖ್ಯ ಶಿಕ್ಷಕ ಮಲ್ಲಪ್ಪ ನಿಟ್ಟಾಲಿ, ಪ್ರಮುಖರಾದ ಅಂಬಮ್ಮ ಬ್ಯಾಡಗಿ, ವೀರಯ್ಯ ಸಿಂದೋಗಿ, ಪೀರಸಾಬ ಬೆಳಗಟ್ಟಿ, ಸಿದ್ದಪ್ಪ ಹಳ್ಳಿ, ಸಾರೆಪ್ಪ ಪೂಜಾರ, ಸಂತೋಷ ಹಳ್ಳಿ, ಚನ್ನಪ್ಪ, ಪರವಿನ್ ಬೆಳಗಟ್ಟಿ, ಶೇಖಪ್ಪ, ಮಾರುತಿ, ಕೃಷ್ಣಪ್ಪ, ರಾಮಣ್ಣ, ಮಂಜುನಾಥ, ಮಲ್ಲಪ್ಪ, ಅಶೋಕ, ಪರಮೇಶಪ್ಪ ಹಾಗೂ ಗ್ರಾಪಂ ಸಿಬ್ಬಂದಿ, ಮಕ್ಕಳು ಇತರರಿದ್ದರು.