ಆಳಂದ: ಧಂಗಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ರಾತ್ರಿ ವಿವಿಧ ಸಾಮಗ್ರಿಗಳ ಕಳ್ಳತನ ನಡೆದಿದೆ.
ಪ್ರಾಜೆಕ್ಟರ್, ಇನ್ವರ್ಟರ್, 8 ಬ್ಯಾಟರಿ, ಧ್ವನಿವರ್ಧಕ ಇತರ ಸಾಮಗ್ರಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಶಾಲೆ ಸಿಬ್ಬಂದಿ ಬುಧವಾರ ಶಾಲೆ ಮುಗಿಸಿ ಬೀಗ ಹಾಕಿ ಮನೆಗೆ ಹೋಗಿದ್ದು, ಗುರುವಾರ ಬೆಳಗ್ಗೆ ಶಾಲೆ ತೆರೆದಾಗ ಕಳವಾಗಿರುವುದು ಗಮನಕ್ಕೆ ಬಂದಿದೆ.
ಪಿಎಸ್‌ಐ ಬಸವರಾಜ ಸಣ್ಣಮನಿ, ಬೆರಳಚ್ಚು, ಶ್ವಾನದಳ ಸಿಬ್ಬಂದಿ ಭೇಟಿ ನೀಟಿ ಪರಿಶೀಲಿಸಿದ್ದು, ಮುಖ್ಯ ಶಿಕ್ಷಕಿ ಸ್ನೇಹಲತಾ ನಾಡಗೌಡ ನಿಂಬರ್ಗಾ ಠಾಣೆಗೆ ದೂರು ನೀಡಿದ್ದಾರೆ.