ಆಳಂದ: ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ದಲಿತ ಸೇನೆ ನಿರಂತರ ಹೋರಾಟ ನಡೆಸಿ, ನ್ಯಾಯ ಕಲ್ಪಿಸುವ ಕೆಲಸ ಮಾಡುತ್ತಿದೆ ಎಂದು ದಲಿತ ಸೇನೆ ಸಂಸ್ಥಾಪಕ ಅಧ್ಯಕ್ಷ ಹಣಮಂತ ಯಳಸಂಗಿ ಹೇಳಿದರು.
ಧಂಗಾಪುರದಲ್ಲಿ ದಲಿತ ಸೇನೆ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, ದಲಿತ ಸೇನೆ ರಾಜ್ಯ ಸೇರಿ ದೇಶದೆಲ್ಲೆಡೆ ಪಸರಿಸಿದೆ. ಗ್ರಾಮದಲ್ಲೂ ಯುವಕರು ಪ್ರಜ್ಞಾವಂತರಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ಸ್ಥಾಪಿಸಿ ಇತರ ಗ್ರಾಮಗಳಿಗೂ ಮಾದರಿಯಾಗಿದ್ದೀರಿ. ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ವ್ಯಕ್ತಿತ್ವ, ಸಂಘಟನೆ ಹಾಗೂ ಸಮಾಜಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ತಾಲೂಕು ಅಧ್ಯಕ್ಷ ಚಂದ್ರಶಾ ಗಾಯಕವಾಡ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ ರೆಡ್ಡಿ, ಪ್ರಮುಖರಾದ ಚಂದ್ರಕಾAತ ವೈಜಾಪುರ, ಅಮೃತ ಯಳಸಂಗಿ, ದತ್ತಾತ್ರೇಯ ಕಟ್ಟಿಮನಿ, ವಸಂತ ಕುಮಸಿ, ಪ್ರಕಾಶ ಜೋಶಿ, ಶಿವಲಿಂಗಪ್ಪ ಮಾಡಿಯಾಳಕರ, ತುಕಾರಾಮ ಮೇಲಕೇರಿ, ಶರಣಬಸಪ್ಪ ಕಾಂಬಳೆ, ಕೃಷ್ಣ ಕಾಂಬಳೆ ಇತರರಿದ್ದರು.
