ರಾಯಚೂರು ಸ್ಥಾವರಕ್ಕೆ ಜಲಾಶಯ ನೀರು

ಆಲಮಟ್ಟಿ: ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಬಳಕೆಗೆ ಮೇ ತಿಂಗಳಲ್ಲಿ ಮೊದಲ ಕಂತವಾಗಿ 0.6 ಟಿಎಂಸಿ ಅಡಿ ನೀರನ್ನು ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

ಶನಿವಾರದಿಂದ ನೀರು ಬಿಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಸದ್ಯ 3000 ಕ್ಯೂಸೆಕ್ ನೀರನ್ನು ಜಲಾಶಯದ ಬಲಭಾಗದ ಕೆಪಿಸಿಎಲ್ ಮೂಲಕ ಹರಿಸಲಾಗುತ್ತಿದೆ. ಗುರುವಾರವಷ್ಟೇ 0.5 ಟಿಎಂಸಿ ನೀರನ್ನು ಜಲಾಶಯದ ಮುಂಭಾಗದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ಹರಿಸಲಾಗಿತ್ತು.

ಜಿಂದಾಲ್ ಅನುಕೂಲಕ್ಕಾಗಿ ನೀರು
ಆಲಮಟ್ಟಿ ಜಲಾಶಯದಿಂದ ಹರಿಬಿಟ್ಟ ನೀರಿನ ಅರ್ಧದಷ್ಟು ನೀರು ನಾರಾಯಣಪುರ ಜಲಾಶಯಕ್ಕೆ ತಲುಪುತ್ತಿಲ್ಲ. ಆಲಮಟ್ಟಿ ಜಲಾಶಯ ಮುಂಭಾಗದಲ್ಲಿರುವ ಜಿಂದಾಲ್ ಕಾರ್ಖಾನೆ ನೀರಿನ ಜಾಕ್‌ವೆಲ್‌ಗೆ ತಲುಪುತ್ತಿದ್ದು, ಅಲ್ಲಿರುವ ಬೃಹತ್ ಯಂತ್ರಗಳು ಈ ನೀರನ್ನು ಹೊಸಪೇಟೆಯ ಜಿಂದಾಲ್ ಕಾರ್ಖಾನೆಗೆ ಸಾಗಿಸುತ್ತಿವೆ. ಹೀಗಾಗಿ ನೀರು ಸಮರ್ಪಕವಾಗಿ ನಾರಾಯಣಪುರ ಜಲಾಶಯಕ್ಕೆ ತಲುಪುತ್ತಿಲ್ಲ. ಜಿಂದಾಲ್ ಅನುಕೂಲಕ್ಕಾಗಿ ಈ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ ಆರೋಪಿಸಿದ್ದಾರೆ.
ಹಿಂಗಾರು ಬೆಳೆಗೆ ನೀರು ಕೊಡಲಿಲ್ಲ. ಈಗ ಯಾವುದೋ ಕಾರ್ಖಾನೆ ಅನುಕೂಲಕ್ಕಾಗಿ ಸರ್ಕಾರ ನೀರು ಹರಿಸುತ್ತಿದೆ ಎಂದು ಅವರು ದೂರಿದ್ದಾರೆ.

Leave a Reply

Your email address will not be published. Required fields are marked *