ಅನಧಿಕೃತ ವಾಸವಾಗಿದ್ದ ಕುಟುಂಬಗಳ ತೆರವು

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ವಸಾಹತುವಿನಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ 42 ಕುಟುಂಬಗಳನ್ನು ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಕೆಬಿಜೆಎನ್​ಎಲ್ ಅಧಿಕಾರಿಗಳು ತೆರವುಗೊಳಿಸಿದರು.

10 ದಿನಗಳಿಂದ ಕೆಬಿಜೆಎನ್​ಎಲ್ ವಸಾಹತು ಖಾಲಿ ಮಾಡಲು ಸೂಚಿಸಲಾಗಿತ್ತು. ಕಳೆದ ಎರಡು ದಿನದಿಂದ ಆಟೋ ಪ್ರಚಾರ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಮಂಗಳವಾರ ಕಾರ್ಯಾಚರಣೆಗಿಳಿದ ಕೆಬಿಜೆಎನ್​ಎಲ್ ಅಧಿಕಾರಿಗಳು, ವಸಾಹತುವಿನಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ ಜನರನ್ನು ಹೊರಗೆ ಕಳುಹಿಸಿದರು. ಹೊರಗಡೆ ಹೋಗಲು ನಿರಾಕರಿಸಿದವರ ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊರಗೆ ತಂದಿಟ್ಟು ಖಾಲಿ ಮಾಡಿಸಿ ಬಾಗಿಲಿಗೆ ಸೀಲ್ ಸಹಿತ ಲಾಕ್ ಮಾಡಲಾಯಿತು.

ಈಗ ಅನಧಿಕೃತವಾಗಿ ವಾಸಿಸುತ್ತಿದ್ದವರನ್ನು ವಸಾಹತುಗಳನ್ನು ಖಾಲಿ ಮಾಡಿಸಲಾಗಿದ್ದು, ಮುಂದಿನ ಹಂತದಲ್ಲಿ ಬಾಡಿಗೆ ಕಟ್ಟುವ ಕೆಬಿಜೆಎನ್​ಎಲ್ ನಿವೃತ್ತ ನೌಕರರು, ಮೃತ ನೌಕರರು ಕುಟುಂಬದವರು ವಾಸಿಸುವ ವಸಾಹತುಗಳನ್ನು ತೆರವುಗೊಳಿಸಲಾಗುವುದು ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಸ್.ಬಿ. ಬಿಜಾಪುರ, ಶರಣಪ್ಪ ಚಲವಾದಿ ತಿಳಿಸಿದರು.

ಆಲಮಟ್ಟಿ ಪಿಎಸ್​ಐ ಎಸ್.ವೈ. ನಾಯ್ಕೋಡಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

Leave a Reply

Your email address will not be published. Required fields are marked *