ಮೊಘಲ್ ಉದ್ಯಾನಕ್ಕೆ ಆಧುನೀಕರಣ ಭಾಗ್ಯ

>

ಆಲಮಟ್ಟಿ: ಅಂದಾಜು 33 ಎಕರೆ ಪ್ರದೇಶದಲ್ಲಿ 2008 ರಿಂದ ಆರಂಭಗೊಂಡ 1.1 ಕಿ.ಮೀ. ಉದ್ದದ ಆಲಮಟ್ಟಿ ಜಲಾಶಯದ ಕೆಳಭಾಗದ ಮೊಘಲ್ ಉದ್ಯಾನಕ್ಕೆ ನವೀಕರಣ ಭಾಗ್ಯ ಒದಗಿಬಂದಿದೆ. ಇದರಿಂದ ಪ್ರವಾಸಿಗರ ಆಕರ್ಷಣೀಯ ತಾಣ ಮೊಘಲ್ ಉದ್ಯಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ರಾಕ್, ಲವಕುಶ, ಕೃಷ್ಣಾ ಉದ್ಯಾನದಿಂದ ಕಂಗೊಳಿಸುತ್ತಿದ್ದ ಆಲಮಟ್ಟಿಗೆ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕೃಷ್ಣಾ ಭಾಗ್ಯ ಜಲ ನಿಗಮ, ಜಲಾಶಯದ ಕೆಳಭಾಗದಲ್ಲಿ 77 ಎಕರೆ ವಿಸ್ತಾರದಲ್ಲಿ 2008 ರಲ್ಲಿ ಸಂಗೀತ ಕಾರಂಜಿ, ಮೊಘಲ್, ್ರೆಂಚ್, ಇಟಾಲಿಯನ್ ಉದ್ಯಾನ ಆರಂಭಗೊಳಿಸಲಾಗಿತ್ತು. ಅದರಲ್ಲಿ ಮೊಘಲ್ ಉದ್ಯಾನದಲ್ಲಿ ಮಾತ್ರ ಸ್ಥಿರ ಕಾರಂಜಿ ಅಳವಡಿಸಿ ಕಲರ್‌ಫುಲ್ ಮಾಡಲಾಗಿತ್ತು. 1.1 ಕಿ.ಮೀ. ಉದ್ದದ ಮೊಘಲ್ ಉದ್ಯಾನದ ಹಲ ಕಡೆ ಕೆಟ್ಟಿದ್ದು, ಪ್ರವಾಸಿಗರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಕೆಲ ಕಡೆ ಮಾಸಿದ ಬಣ್ಣದ ಲೈಟಿಂಗ್, ಮತ್ತೊಂದೆಡೆ ನಿರ್ವಹಿಸದ ಕಾರಂಜಿಗಳಿಂದ ಹದಗೆಟ್ಟಿದ್ದವು.

2.1 ಕೋಟಿ ರೂ. ಕಾಮಗಾರಿ

ನೂತನ ತಂತ್ರಜ್ಞಾನ ಅಳವಡಿಸಿ ಆಧುನೀಕರಣಗೊಳಿಸುವ ಭಾಗವಾಗಿ ಮೊಘಲ್ ಉದ್ಯಾನದಲ್ಲಿ ಲೈಟಿಂಗ್ ವ್ಯವಸ್ಥೆ ಸಂಪೂರ್ಣ ಬದಲಾವಣೆ, ನೂತನ ಆರ್‌ಜಿಬಿ ತಂತ್ರಜ್ಞಾನ (ಆರ್‌ಜಿಬಿ- ಅಂದರೆ ಕೆಂಪು, ಹಸಿರು, ಬಿಳಿ)ದ 1200 ಎಲ್‌ಇಡಿ ಲೈಟಿಂಗ್‌ನ್ನು ನೀರಿನಲ್ಲಿ ಅಳವಡಿಕೆ, ವಿದ್ಯುತ್ ವೈಯರಿಂಗ್, ಕೆಟ್ಟ ಪೈಪ್‌ಗಳ ಬದಲಾವಣೆ ನಡೆಯಲಿದೆ.

ಆರ್‌ಜಿಬಿ ಎನ್ನುವುದು ಮೂರು ಬಣ್ಣವಾಗಿದ್ದು, ಈ ಮೂರು ಬಣ್ಣಗಳ ಸಂಯೋಜನೆಯಿಂದ ಸಹಸ್ರಾರು ಬೇರೆ ಬೇರೆ ಬಣ್ಣ ಉತ್ಪತ್ತಿಯಾಗುತ್ತವೆ. ಕಾಮಗಾರಿಯನ್ನು ಕೋಲ್ಕತ್ತ್ತದ ಪ್ರಿಮಿಯರ್ ಕಂಪನಿಯವರು ಗುತ್ತಿಗೆ ಪಡೆದಿದ್ದು, ಮುಂದಿನ ಐದು ವರ್ಷ ನಿರ್ವಹಣೆ ಹೊಣೆಯೂ ಅವರದ್ದೇ ಆಗಿದೆ ಎಂದು ಸಹಾಯಕ ಇಂಜಿನಿಯರ್ ಶಂಕ್ರಯ್ಯ ಮಠಪತಿ ತಿಳಿಸಿದರು.

ಕಾಮಗಾರಿ ಆರಂಭಗೊಂಡಿದ್ದರಿಂದ ತಾತ್ಕಾಲಿಕವಾಗಿ ಮೊಘಲ್ ಉದ್ಯಾನ ಸ್ಥಗಿತಗೊಂಡಿದೆ. ಬಹುತೇಕ ೆಬ್ರವರಿಯಲ್ಲಿ ಮೊಘಲ್ ಉದ್ಯಾನ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.