ಗುತ್ತಿಗೆದಾರರ ಬಿಲ್ಲು ತಡೆಹಿಡಿಯಿರಿ

ಆಲಮಟ್ಟಿ: ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಲ್ಲಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಹಾಗೂ ಕಾಲುವೆಗಳ ವಿಶೇಷ ದುರಸ್ತಿಗೊಳಿಸುವ ಕ್ಲೋಜರ್ ಹಾಗೂ ಸ್ಪೇಶಲ್ ರಿಪೇರಿ ಕಾಮಗಾರಿಗಳ ಗುತ್ತಿಗೆ ಪಡೆದವರ ಬಿಲ್ಲನ್ನು ತಡೆಹಿಡಿಯಬೇಕು ಎಂದು ಕೃಷ್ಣಾ ಭಾಗ್ಯ ಜಲನಿಗಮದ ಆಲಮಟ್ಟಿ ವಲಯ ಮುಖ್ಯಅಭಿಯಂತರ ಮೂಲಕ ಜಲಸಂಪನ್ಮೂಲ ಸಚಿವರಿಗೆ ಕರವೇ ಆಲಮಟ್ಟಿ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
2018ನೇ ಸಾಲಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮುಂಗಾರು ಹಂಗಾಮಿಗೆ ರೈತರ ಜಮೀನುಗಳಿಗೆ ನೀರು ಹರಿಸಿ ಹಿಂಗಾರು ಹಂಗಾಮಿಗೆ ನೀರು ಸ್ಥಗಿತಗೊಳಿಸಿ ಯೋಜನೆ ಲಾನುಭವಿ ಜಿಲ್ಲೆಗಳ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರು ಸಂಗ್ರಹ ಮಾಡಿಕೊಂಡು ರೈತರ ಜಮೀನುಗಳಿಗೆ ನೀರು ಹರಿಸಲಿಲ್ಲ. ಬೇಸಿಗೆಯ ಅವಧಿಯಲ್ಲಿ ಕಾಲುವೆಗಳಲ್ಲಿನ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಮತ್ತು ವಿಶೇಷ ದುರಸ್ತಿಗೊಳಿಸುವ ಕಾಮಗಾರಿಗಳನ್ನು ಮಾಡದೇ ಮುಂಗಾರು ಮಳೆ ಆರಂಭವಾದ ನಂತರ ಮತ್ತು ಕೃಷ್ಣೆಯ ಉಗಮಸ್ಥಾನದಲ್ಲಿ ವ್ಯಾಪಕವಾಗಿ ಮಳೆ ಸುರಿದು ಆಲಮಟ್ಟಿ ಲಾಲಬಹಾದ್ದೂರಶಾಸಿ ಜಲಾಶಯ ತುಂಬುವ ವೇಳೆಯಲ್ಲಿ ಕಾಲುವೆಗಳ ಕ್ಲೋಜರ್ ಹಾಗೂ ಸ್ಪೇಶಲ್ ರಿಪೇರಿ ಕಾಮಗಾರಿಗಳಿಗೆ ಟೆಂಡರ್ ಕರೆದಿರುವದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ಕೆಲ ವರ್ಷಗಳಿಂದ ಬರದಿಂದ ಬಸವಳಿದಿರುವ ರೈತರ ಜಮೀನುಗಳಿಗೆ ನೀರು ಕೊಡುವ ವೇಳೆಯಲ್ಲಿ ಕ್ಲೋಜರ್ ಹಾಗೂ ಸ್ಪೇಶಲ್ ರಿಪೇರಿ ಕಾಮಗಾರಿಗಳನ್ನು ಕರೆದಿರುವುದರಿಂದ ಗುತ್ತಿಗೆದಾರರು ಗಡಿಬಿಡಿಯಲ್ಲಿ ೋಟೋಗಳಿಗೆ ಸೀಮಿತವಾಗಿ ಕಾಮಗಾರಿಗಳನ್ನು ಗಡಿಬಿಡಿಯಲ್ಲಿ ಆರಂಭಿಸುವ ಹಂತದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಸರ್ಕಾರದ ಹಣ ದುರ್ಬಳಕೆಯಾಗದಂತೆ ಕ್ರಮ ಕೈಗೊಂಡು ಬಿಲ್ಲನ್ನು ತಡೆಹಿಡಿಯಬೇಕೆಂದು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ವಿನಂತಿಸಿದ್ದಾರೆ.
ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಬಿಲ್ಲನ್ನು ತಡೆಹಿಡಿಯದ ಪಕ್ಷದಲ್ಲಿ ಅವಳಿ ಜಿಲ್ಲೆಯ ರೈತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಉಗ್ರಹೋರಾಟ ಮಾಡಲಾಗುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಕೃಷ್ಣಾ ಭಾಗ್ಯಜಲನಿಗಮದ ಆಲಮಟ್ಟಿ ವಲಯ ಉಪಮುಖ್ಯ ಅಭಿಯಂತರ ಎಂ.ಎನ್.ಪದ್ಮಜಾ ಅವರು ಕೆಲವು ಕಾಮಗಾರಿಗಳು ಆರಂಭವಾಗಿವೆ. ಅವುಗಳ ಗುಣಮಟ್ಟವನ್ನು ಪರಿಶೀಲಿಸಿಯೇ ಬಿಲ್ಲನ್ನು ನೀಡುವುದು ವಾಡಿಕೆಯಾಗಿದೆ ಎಂದರು.
ಕರ್ನಾಟಕ ರಕ್ಷಣಾವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಆಲಮಟ್ಟಿ ಘಟಕದ ಅಧ್ಯಕ್ಷ ಚಂದ್ರಶೇಖರ ಬಳ್ಳಾರಿ, ರಫೀಕ ಅಥಣಿ, ಮೈಬೂಬ ಡೊಣೂರ, ಆಶ್ೀ ಕಂಕಣಪೀರ, ಮೈಬೂಬ ತೆಲಗಿ ಮೊದಲಾದವರಿದ್ದರು.

Leave a Reply

Your email address will not be published. Required fields are marked *