ಮೃತರ ಕುಟುಂಬಕ್ಕೆ ಸಹಾಯ ಧನ

ಆಲಮಟ್ಟಿ: ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದು ಮೃತಪಟ್ಟ ಚಿಮ್ಮಲಗಿ ಭಾಗ-1ರ ನಿವಾಸಿ ಮಂಜುನಾಥ ಯಲ್ಲಪ್ಪ ಕೋಲಾರ ಹಾಗೂ ಸಂತೋಷ ಶಿವಪ್ಪ ಚವಡಾಪುರ ಕುಟುಂಬಕ್ಕೆ ಸಚಿವ ಶಿವಾನಂದ ಪಾಟೀಲರ ಪರವಾಗಿ ಅವರ ಪುತ್ರಿ ಸಂಯುಕ್ತಾ ಪಾಟೀಲ ತಲಾ 50 ಸಾವಿರ ರೂ. ಸಹಾಯ ಧನ ನೀಡಿ ಸಾಂತ್ವನ ಹೇಳಿದರು.

ನಂತರ ಮಾತನಾಡಿ, ಸರ್ಕಾರದಿಂದ ಇನ್ನಷ್ಟು ನೆರವು ಒದಗಿಸಲು ಪ್ರಯತ್ನಿಸುತ್ತೇನೆ. ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಆಲಮಟ್ಟಿಯಿಂದ ನಿಡಗುಂದಿವರೆಗೆ ಪದೇ ಪದೆ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ತಡೆಗಟ್ಟಲು ಕಾಲುವೆಗುಂಟ ಸುರಕ್ಷಾ ಗ್ಯಾಲರಿ ಅಳವಡಿಸಲು ಹಾಗೂ ಕಾಲುವೆಯ ಕೆಲ ಅಂತರಗಳಲ್ಲಿ ರೋಪ್ ಹಾಕುವ ಬಗ್ಗೆಯೂ ಅಧಿಕಾರಿಗಳ ಜತೆ ರ್ಚಚಿಸುತ್ತೇನೆ ಎಂದು ಸಂಯುಕ್ತಾ ಭರವಸೆ ನೀಡಿದರು.

ಮುಖಂಡರಾದ ಎಂ.ಆರ್. ಕಮತಗಿ, ಡಾ. ಎಸ್.ಎಂ. ಭಗವತಿ, ಮುದಕಪ್ಪ ಕುಂಬಾರ, ನಜೀರ್​ಅಹ್ಮದ್ ಮುದ್ದೇಬಿಹಾಳ, ಗಿರೀಶ ಮರೋಳ ಇತರರು ಇದ್ದರು.