ಬೃಹತ್ ಮೊಸಳೆ ಸೆರೆ

ಆಲಮಟ್ಟಿ: ಸಮೀಪದ ಬೇನಾಳ ಕ್ರಾಸ್ ಹತ್ತಿರದ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿದ್ದ ಬೃಹತ್ ಮೊಸಳೆಯನ್ನು ಶುಕ್ರವಾರ ಸೆರೆಹಿಡಿದು ಅಣೆಕಟ್ಟೆ ಹಿನ್ನೀರಿನಲ್ಲಿ ಬಿಡಲಾಯಿತು.

ಕಾಲುವೆಯಲ್ಲಿದ್ದ ಮೊಸಳೆ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಅರಣ್ಯಾಧಿಕಾರಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಕೆಲ ಜನತೆ ಹಾಗೂ ಮೀನುಗಾರರ ಸಹಾಯದಿಂದ ಬಲೆ ಬೀಸಿ ಮೊಸಳೆ ಸೆರೆಹಿಡಿದರು. ಬಳಿಕ ಟ್ರ್ಯಾಕ್ಟರ್ ಟ್ರೇಲರ್​ನಲ್ಲಿ ಹಾಕಿಕೊಂಡು ಹಿನ್ನೀರಿನಲ್ಲಿ ಬಿಡಲಾಯಿತು.

ಆರ್​ಎಫ್​ಒ ಮಹೇಶ ಪಾಟೀಲ ಮಾರ್ಗದರ್ಶನದಲ್ಲಿ ಮೊಸಳೆ ಸೆರೆಹಿಡಿಯಲಾಯಿತು. ಮಲ್ಲಿಕಾರ್ಜುನ, ವಿರೂಪಾಕ್ಷಿ, ಅಮೀನಸಾಬ, ಕಾಳೇಸಾಬ, ಬಾಬು ನದಾಫ್, ಅಶೋಕ ಗಂಟಿ, ಆನಂದ ಕೊರವರ, ಪ್ರಕಾಶ ಭಟ್ಟರ, ಯಲಗೂರೇಶ ಕಟ್ಟಿಮನಿ, ಮಾರುತಿ ಕಂಟಿ, ಭೀಮಣ್ಣ ಹಾವಿನ್ನವರ, ಸೋಮು ಕಟ್ಟಿಮನಿ, ಶ್ರೀಶೈಲ ಕಟ್ಟಿಮನಿ ಸಹಕರಿಸಿದರು.