ಎರಡು ಬೈಕ್ ಮಧ್ಯೆ ಡಿಕ್ಕಿ, ವ್ಯಕ್ತಿ ಸಾವು

ಆಲಮಟ್ಟಿ: ನಾಯನೇಗಲಿಯಿಂದ ತಡಲಗಿಗೆ ಹೋಗುವಾಗ ಬೇನಾಳ ಆರ್.ಎಸ್.ಗ್ರಾಮದ ಹತ್ತಿರ ಗುರುವಾರ ಎರಡು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಡಲಗಿ ಗ್ರಾಮದ ಸೋಮಪ್ಪ ಕೀರಪ್ಪ ಕವಳ್ಳಿ (50) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.