ಜಲಾಶಯ ಪರಿಶೀಲಿಸಿದ ಎಸ್‌ಪಿ

ಆಲಮಟ್ಟಿ: ಯಾವುದೇ ತರಬೇತಿ ವಿಮಾನಗಳು ಕೆಳಮಟ್ಟದಲ್ಲಿ ಹಾರಬಾರದು ಎಂದು ವಾಯುಸೇನೆಯ ಬೀದರ್, ಹೈದರಾಬಾದ್ ತರಬೇತಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದರು.

ಆಲಮಟ್ಟಿ ಜಲಾಶಯದ ಸುತ್ತ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿರುವ ವಿಮಾನದ ಕುರಿತು ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯನ್ನು ಪರಿಗಣಿಸಿ ಗುರುವಾರ ಜಲಾಶಯ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ವಾಯುಸೇನೆಯಿಂದ ಉತ್ತರ ಇನ್ನೂ ಬಂದಿಲ್ಲ ಎಂದ ಅವರು, ಆಲಮಟ್ಟಿಯಲ್ಲಿ ಸುಗಮ ಸಂಚಾರಕ್ಕಾಗಿ ಐವರು ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗುವುದು. ಆಲಮಟ್ಟಿ ಪೊಲೀಸ್ ಠಾಣೆಯ ವಿಸ್ತರಣೆಯ ಯಾವುದೇ ಪ್ರಸ್ತಾವನೆಯೂ ಇಲ್ಲ, ಆಲಮಟ್ಟಿ ಜಲಾಶಯದ ರಕ್ಷಣೆಗಾಗಿ ಇಲ್ಲಿ ಪೊಲೀಸ್ ಠಾಣೆ ಆರಂಭಿಸಲಾಗಿತ್ತು ಎಂದರು. ಡಿವೈಎಸ್‌ಪಿ ಮಹೇಶ್ವರಗೌಡ ಇನ್ನಿತರರು ಇದ್ದರು.