ದೀಪಾ ಕರುಣ್‌ಗೆ ಅಕ್ಕನ ಬಳಗದ ಸದಸ್ಯರಿಂದ ಸನ್ಮಾನ

blank

ಕುಶಾಲನಗರ:

ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಕುಶಾಲನಗರದ ದೀಪಾ ಕರುಣ್ ಆಯ್ಕೆಯಾಗಿದ್ದಾರೆ.

ನಿಯೋಜಿತ ಅಧ್ಯಕ್ಷೆ ದೀಪಾ ಅವರನ್ನು ಕುಶಾಲನಗರದ ಅಕ್ಕನ ಬಳಗದ ಸದಸ್ಯರು ಸ್ಥಳೀಯ ಬಸವೇಶ್ವರ ದೇವಾಲಯದಲ್ಲಿ ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಅಕ್ಕನ ಬಳಗದ ಮಾಜಿ ಅಧ್ಯಕ್ಷೆ ವಿಜಯಪಾಲಾಕ್ಷ, ಕೊಡಗಿನ ರಾಜ ಮನೆತನ ಸತತವಾಗಿ 200 ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದ್ದರು. ಆದರೆ ಇಂದು ಜಿಲ್ಲೆಯಲ್ಲಿ ವೀರಶೈವ ಸಮಾಜಕ್ಕೆ ಭದ್ರವಾದ ಬುನಾದಿಯೇ ಇಲ್ಲವಾಗಿದೆ. ಜಿಲ್ಲಾ ಕೇಂದ್ರವಾಗಲೀ, ಯಾವುದೇ ತಾಲೂಕು ಕೇಂದ್ರಗಳಲ್ಲಿ ಆಗಲೀ ವೀರಶೈವ ಸಮಾಜವನ್ನು ಪ್ರತಿನಿಧಿಸುವ ಒಂದೇ ಒಂದು ಭವನಗಳಿಲ್ಲ.

ಈಗ ಇರುವ ಅಖಿಲ ಭಾರತ ವೀರಶೈವ ಜಿಲ್ಲಾ ಘಟಕ ಜಿಲ್ಲೆಯಾದ್ಯಂತ ವೀರಶೈವ ಸಮಾಜವನ್ನು ಸಂಘಟಿಸಬೇಕು. ಆ ಮೂಲಕ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಬಸವ ಭವನಗಳ ನಿರ್ಮಾಣ ಮಾಡುವತ್ತ ಶಪಥ ಮಾಡಬೇಕು. ಕುಶಾಲನಗರ ಪಟ್ಟಣದಲ್ಲಿ 350 ಕ್ಕೂ ಹೆಚ್ಚು ವೀರಶೈವ ಸಮಾಜದ ಕುಟುಂಬಗಳಿದ್ದೂ ಒಂದೆಡೆ ಸೇರಲು ಸ್ಥಳಾವಕಾಶವಿಲ್ಲ. ಇದ್ದ ಬಸವೇಶ್ವರ ದೇವಾಲಯವನ್ನು ಹೆದ್ದಾರಿ ವಿಸ್ತರಣೆಗೆಂದು ಒಡೆದು ಹಾಕಲಾಗಿದೆ. ಇದೀಗ ಭಕ್ತ ಜನರು ಕೂರಲು ಕೂಡ ದೇವಾಲಯದ ಆವರಣದಲ್ಲಿ ಜಾಗವಿಲ್ಲವಾಗಿದೆ. ಆದ್ದರಿಂದ ಸಮಾಜದ ಪದಾಧಿಕಾರಿಗಳು ಸಮಾಜ ಹಾಗೂ ಸಮುದಾಯದ ಅಭಿವೃದ್ದಿಗೆ ಶ್ರಮಿಸಬೇಕೆಂದರು.

ಈ ಸಂದರ್ಭ ಕುಶಾಲನಗರ ಕದಳಿ ವೇದಿಕೆಯ ನಿಯೋಜಿತ ಅಧ್ಯಕ್ಷೆ ಬಿ.ಬಿ. ಹೇಮಲತಾ, ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ಕೋಶಾಧಿಕಾರಿ ಜಿ.ಎಸ್. ವೇದಾವತಿ ಮೂರ್ತಿ, ಪ್ರಮುಖರಾದ ಮನುದೇವಿ, ಬೇಬಿ, ಸೌಭಾಗ್ಯ, ಮಣಿಶಿವಣ್ಣ, ಲಕ್ಷ್ಮಿಪಲ್ಲೇದ್ ಇತರರಿದ್ದರು.

Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…