ಅಕ್ಕ’ ಸಮ್ಮೇಳನದಲ್ಲಿ ‘ಥಟ್ ಅಂತ ಹೇಳಿ’ : ಡಾ. ನಾ. ಸೋಮೇಶ್ವರ ನೇತೃತ್ವ

ಬೆಂಗಳೂರು: ಅಮೆರಿಕದ ವರ್ಜೀನಿಯಾದಲ್ಲಿರುವ ಗ್ರೇಟರ್ ರಿಚ್ಮಂಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ರಿಚ್ಮಂಡ್ ಕನ್ನಡ ಸಂಘ ಮತ್ತು ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘಗಳ ಸಹಯೋಗದಲ್ಲಿ ಆ. 30ರಿಂದ ಸೆ. 1ರವರೆಗೆ ‘12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ’ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ.

ಈ ಬಾರಿಯ ಸಮ್ಮೇಳನದಲ್ಲಿ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಲಿದೆ. ಇದಕ್ಕಾಗಿ ಡಾ. ನಾ. ಸೋಮೇಶ್ವರ ಅವರನ್ನು ಅಕ್ಕ ಸಮ್ಮೇಳನದ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರಿಂದ ಆಶಯ ಭಾಷಣ ಇರಲಿದೆ. ರಸಪ್ರಶ್ನೆ ಸ್ಥಳದಲ್ಲೇ ಲಿಖಿತ ಪರೀಕ್ಷೆಯನ್ನೂ ಆಯೋಜಿಸಲಾಗಿದೆ. ಅದರಲ್ಲಿ ಆಯ್ಕೆಯಾಗುವ ಎಂಟು ಮಂದಿಯನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ನಂತರ ಚಂದನ ವಾಹಿನಿ ಮಾದರಿಯಲ್ಲಿಯೇ ಕಾರ್ಯಕ್ರಮ ನಡೆಸಲಾಗುವುದು. ಇದರಲ್ಲಿ ಹೆಚ್ಚು ಅಂಕ ಗಳಿಸುವ ತಲಾ ಇಬ್ಬರು ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರೆ. ಒಟ್ಟು ನಾಲ್ಕು ಸ್ಪರ್ಧಿಗಳ ಅಂತಿಮ ಸುತ್ತನ್ನು ಸಮ್ಮೇಳನ ಸಭಾಂಗಣದ ಭವ್ಯ ವೇದಿಕೆಯಲ್ಲಿ ನಡೆಸಲಾಗುವುದು.

‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸರಿಯುತ್ತರ ನೀಡುವವರಿಗೆ ಅಮೆರಿಕನ್ನಡಿಗ ಲೇಖಕ-ಲೇಖಕಿಯರ ಪ್ರಕಟಿತ ಪುಸ್ತಕಗಳನ್ನೂ ಆಯ್ದುಕೊಳ್ಳಲಾಗಿದೆ. ಅಂತೆಯೇ ಒಬ್ಬೊಬ್ಬರೇ ಪ್ರತ್ಯೇಕವಾಗಿ ಸ್ಪರ್ಧಿಸುವುದಕ್ಕಿಂತ ಗಂಡ-ಹೆಂಡತಿ, ಅಕ್ಕ-ತಂಗಿ, ತಾಯಿ-ಮಗಳು ರೀತಿಯಲ್ಲಿ ಕೌಟುಂಬಿಕ ಬಂಧದ ಒಂದೊಂದು ತಂಡದಂತೆ ಸ್ಪರ್ಧಿಸುವುದನ್ನು ಉತ್ತೇಜಿಸಲಾಗಿದೆ.

ಜೊತೆಗೆ ಅಮೆರಿಕನ್ನಡಿಗರಿಂದ ಮತ್ತು ಕರ್ನಾಟಕದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯಕ ಚಟುವಟಿಕೆಗಳು, ಗಾಯನ- ನೃತ್ಯ ಸ್ಪರ್ಧೆಗಳು, ವಾಣಿಜ್ಯ ಸಂಕಿರಣಗಳು, ಭವ್ಯವಾದ ಮೆರವಣಿಗೆ, ಜೊತೆಗೆ ಬಗೆಬಗೆಯ ಊಟೋಪಚಾರ ಇರಲಿವೆ ಎಂದು ಸಮ್ಮೇಳನದ ಸಂಚಾಲಕರಾದ ಷಣ್ಮುಗಂ ವೆಂಕಟರಂಗನ್ ಮತ್ತು ಹರಿದಾಸ್ ಲಹರಿ ತಿಳಿಸಿದ್ದಾರೆ.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…