ಹೈದರಾಬಾದ್: ತೆಲುಗು ನಟ ನಾಗಚೈತನ್ಯ ಮತ್ತು ನಟಿ ಸಮಂತಾ ರತು ಪ್ರಭು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ (Divorce) ಪಡೆದು ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು. ಡಿವೋರ್ಸ್ ನಂತರ ಯಾವುದೇ ವಿಷಯದಲ್ಲಿಯೂ ಒಬ್ಬರಿಗೊಬ್ಬರು ಬೆರಳು ಮಾಡಿ ತೋರಿಸದೆ ತಮ್ಮ ಪಾಡಿಗೆ ತಾವಿದ್ದಾರೆ. ಆದರೆ, ಮುಗಿದು ಹೋದ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಅಧ್ಯಾಯದ ಬಗ್ಗೆ ಮಾತನಾಡಿದ ತೆಲಂಗಾಣ ಸಚಿವೆ ಕೊಂಡ ಸುರೇಖಾ (Konda Surekha), ಮನಬಂದಂತೆ ನಾಗಾರ್ಜುನ ಕುಟುಂಬ ಕುರಿತು ನಾಲಿಗೆ ಹರಿಬಿಟ್ಟರು. ಈ ವಿಷಯದಿಂದ ಮನಸ್ಸಿಗೆ ತೀವ್ರ ಘಾಸಿಯಾದ ಹಿನ್ನಲೆ ಹಿರಿಯ ನಟ ನಾಗಾರ್ಜುನ (Nagarjuna), ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Notice) ಹೂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅಖಿಲ್ ಅಕ್ಕಿನೇನಿ ಕೂಡ ಸಚಿವೆ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕೆಂಪಾದವೋ ನರಸೀಪುರದ ಕೆರೆಗಳು ಕೆಂಪಾದವೋ ; ಪ್ರಾಣಿ ಹತ್ಯೆ ಕಾರಣ ಎಂಬ ಆರೋಪ
ತನ್ನ ವಿವಾದಾತ್ಮಕ ಹೇಳಿಕೆಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಕೊಂಡಾ ಸುರೇಖಾ ಬಹಿರಂಗವಾಗಿ ಕ್ಷಮೆಯಾಚಿಸಿದ್ದೇ ಆದರೂ ಅನೇಕರು ಸಚಿವೆಯನ್ನು ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅಖಿಲ್ ಅಕ್ಕಿನೇನಿ, “ಕೊಂಡಾ ಸುರೇಖಾ ಅವರ ಆಧಾರರಹಿತ ಮತ್ತು ಹಾಸ್ಯಾಸ್ಪದ ಹೇಳಿಕೆಗಳು ತೀರ ಅಸಭ್ಯ ಮತ್ತು ಹೇಯ. ಜನಸೇವಕಿಯಾಗಿ ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಆಕೆ ತನ್ನ ನೈತಿಕತೆ ಮತ್ತು ಸಮಾಜ ಕಲ್ಯಾಣವನ್ನು ಮರೆತು ನಡೆದುಕೊಂಡ ರೀತಿ ನಾಚಿಕೆಗೇಡು ಮತ್ತು ಅಕ್ಷಮ್ಯ” ಎಂದರು.
ಜಾಲತಾಣದಲ್ಲಿ ಅಖಿಲ್ ಹೇಳಿದ್ದೇನು?
“ಆಕೆಯ ಹೇಳಿಕೆಯಿಂದ ಗೌರವಾನ್ವಿತ ನಾಗರಿಕರು ಮತ್ತು ಪ್ರಾಮಾಣಿಕ ಕುಟುಂಬ ಸದಸ್ಯರ ಮನಸಿಗೆ ಘಾಸಿ ಉಂಟಾಗಿದೆ. ರಾಜಕೀಯ ಯುದ್ಧದಲ್ಲಿ ಕೊಂಡಾ ಸುರೇಖಾ ಸ್ವಾರ್ಥದಿಂದ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಮುಗ್ಧ ಜನರ ಮೇಲೆ ನಿರ್ಲಜ್ಜವಾಗಿ ದಾಳಿ ಮಾಡಿ, ಅವರನ್ನು ಬಲಿಪಶು ಮಾಡುತ್ತಾರೆ. ಕುಟುಂಬ ಹಾಗೂ ಚಿತ್ರರಂಗದ ಸದಸ್ಯನಾಗಿ ನಾನು ಸುಮ್ಮನಿರುವುದಿಲ್ಲ. ಇಂತಹ ನಾಚಿಕೆಯಿಲ್ಲದ ವ್ಯಕ್ತಿಗೆ ಶಿಕ್ಷೆಯಾಗಬೇಕು. ಸುರೇಖಾರ ತಪ್ಪನ್ನು ನಾನು ಕ್ಷಮಿಸುವುದಿಲ್ಲ. ಇಂಥವರಿಗೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ” ಎಂದು ಅಖಿಲ್ ತಮ್ಮ ಇನ್ಸ್ಟಾಗ್ರಾನ್ ಸ್ಟೋರಿಸ್ನಲ್ಲಿ ಬರೆದುಕೊಳ್ಳುವ ಮುಖೇನ ಕಿಡಿಕಾರಿದ್ದಾರೆ,(ಏಜೆನ್ಸೀಸ್).
ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಾ? ನೀವು ಅಂದುಕೊಂಡಂತಲ್ಲ ಬೆಂಗಳೂರು, ನೋಡುವ ದೃಷ್ಟಿ ಸರಿಯಿರಬೇಕಷ್ಟೇ!
ಗಿನ್ನಿಸ್ ದಾಖಲೆಗೆ ಸೇರಿತು ರೇಡಿಯೋ ಮ್ಯೂಸಿಯಂ! ಇಲ್ಲಿರುವ ಒಟ್ಟು ಟೇಪ್ ರೆಕಾರ್ಡರ್ ಸಂಖ್ಯೆ ಎಷ್ಟು ಗೊತ್ತೇ?