More

  ವಿಶ್ವೇಶ್ವರನ್‌ಗೆ ಅಕಾಡೆಮಿ ರತ್ನ ಪುರಸ್ಕಾರ: ಕರ್ನಾಟಕ 10 ಸಾಧಕರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

  ಬೆಂಗಳೂರು: ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕೊಡಮಾಡುವ ಅತ್ಯುನ್ನತ ಗೌರವ ಫೆಲೋಶಿಪ್ (ಅಕಾಡೆಮಿ ರತ್ನ) ಪ್ರಶಸ್ತಿಗೆ ಮೈಸೂರಿನ ಖ್ಯಾತ ಹಿರಿಯ ವೀಣಾ ವಾದಕ ಆರ್.ವಿಶ್ವೇಶ್ವರನ್ ಭಾಜನರಾಗಿದ್ದಾರೆ. ಉಳಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿರುವ ಕರ್ನಾಟಕದ 10 ಮಂದಿ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

  ಅಕಾಡೆಮಿ ರತ್ನ ಹಾಗೂ 2022-23ನೇ ಅಕಾಡೆಮಿ ಪುರಸ್ಕಾರ ಮತ್ತು 2023-24ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆಯಾದವರ ಹೆಸರುಗಳನ್ನು ಬುಧವಾರ ಅಕಾಡೆಮಿ ಪ್ರಕಟಿಸಿದೆ. ಸಂಗೀತ, ನೃತ್ಯ, ಹಿಂದುಸ್ತಾನಿ ಗಾಯನ, ನಾಟಕ, ರಂಗಭೂಮಿ, ಜಾನಪದ, ರಂಗಮಂದಿರ ಮತ್ತು ಬೊಂಬೆಯಾಟ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿದೆ.

  ವಿಶ್ವೇಶ್ವರನ್‌ಗೆ ಅಕಾಡೆಮಿ ರತ್ನ ಪುರಸ್ಕಾರ: ಕರ್ನಾಟಕ 10 ಸಾಧಕರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

  ಮೈಸೂರಿನ ಖ್ಯಾತ ವೈಣಿಕ ಆರ್.ವಿಶ್ವೇಶ್ವರನ್ ಸೇರಿ ದೇಶದ 6 ಮಂದಿ ಅಕಾಡೆಮಿ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 3 ಲಕ್ಷ ನಗದು ಒಳಗೊಂಡಿದೆ. ಅಕಾಡೆಮಿ ಪುರಸ್ಕಾರ ತಲಾ 1 ಲಕ್ಷ ರೂ. ನಗದು ಹಾಗೂ ತಾಮ್ರಪತ್ರ ಒಳಗೊಂಡಿದೆ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವು ತಲಾ 25 ಸಾವಿರ ರೂ. ನಗದು, ತಾಮ್ರಪತ್ರ ಹಾಗೂ ಪ್ರಶಸ್ತಿ ಒಳಗೊಂಡಿದೆ. ಅಕಾಡೆಮಿ ರತ್ನ ಹಾಗೂ ಅಕಾಡೆಮಿ ಪುರಸ್ಕಾರವನ್ನು ರಾಷ್ಟ್ರಪತಿ, ಯುವ ಪುರಸ್ಕಾರವನ್ನು ಅಕಾಡೆಮಿ ಅಧ್ಯಕ್ಷರು ಪ್ರದಾನ ಮಾಡಲಿದ್ದಾರೆ.

  ವಿಶ್ವೇಶ್ವರನ್‌ಗೆ ಅಕಾಡೆಮಿ ರತ್ನ ಪುರಸ್ಕಾರ: ಕರ್ನಾಟಕ 10 ಸಾಧಕರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

  2022ನೇ ಸಾಲಿನ ಅಕಾಡೆಮಿ ಪುರಸ್ಕಾರಕ್ಕೆ ಕರ್ನಾಟಕ ಸಂಗೀತದ ವಿದ್ವಾನ್ ಎಸ್.ಶಂಕರ್, ಬೆಂಗಳೂರಿನ ವೀಣಾ ವಿದ್ವಾನ್ ಜಯಂತಿ ಕುಮರೇಶ್, ಬೆಂಗಳೂರಿನ ಕರ್ನಾಟಕ ಸಂಗೀತ ವಿದುಷಿ ಪುಸ್ತಕಂ ರಮಾ ಅವರು ಆಯ್ಕೆಯಾಗಿದ್ದಾರೆ. 2023ನೇ ಸಾಲಿನಲ್ಲಿ ಇದೇ ಪ್ರಶಸ್ತಿಗೆ ಬೆಂಗಳೂರು ವಯೊಲಿನ್ ವಾದಕ ಎಚ್.ಕೆ.ವೆಂಕಟರಾಮ್, ಕುಮಾರ ಗಂಧರ್ವ ಅವರ ಪುತ್ರಿ ಪ್ರಸಿದ್ಧ ಗಾಯಕಿ ಕಲಾಪಿನಿ ಕೊಂಕಾಲಿ, ಭರತ ನಾಟ್ಯ ಹಾಗೂ ಕಥಕ್ ನೃತ್ಯಪಟುಗಳಾದ ನಿರುಪಮಾ ಮತ್ತು ರಾಜೇಂದ್ರ ಆಯ್ಕೆಯಾಗಿದ್ದಾರೆ.

  ವಿಶ್ವೇಶ್ವರನ್‌ಗೆ ಅಕಾಡೆಮಿ ರತ್ನ ಪುರಸ್ಕಾರ: ಕರ್ನಾಟಕ 10 ಸಾಧಕರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

  2022ನೇ ಸಾಲಿನ ಉಸ್ತಾದ್ ಬಿಸಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಲೇಖಕ ಬೇಲೂರು ರಘುನಂದನ್, ವೀಣಾ ವಾದಕಿ ಎಸ್.ವಿ.ಸಹನಾ ಹಾಗೂ 2023ನೇ ಸಾಲಿನಲ್ಲಿ ಗಾಯಕ ಎಸ್.ಆರ್.ವಿನಯ್ ಶರ್ವಾ ಆಯ್ಕೆಯಾಗಿದ್ದಾರೆ. ಒಟ್ಟಾರೆ ದೇಶದ ವಿವಿಧ ರಾಜ್ಯಗಳ 92 ಕಲಾವಿದರಿಗೆ 22-23ನೇ ಸಾಲಿನಲ್ಲಿ ಅಕಾಡೆಮಿ ಪುರಸ್ಕಾರ ಹಾಗೂ 80 ಯುವ ಕಲಾವಿದರಿಗೆ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವ ಪುರಸ್ಕಾರ ಘೋಷಿಸಲಾಗಿದೆ.

  ಕಾಂಗ್ರೆಸ್ ದೇಶದ್ರೋಹಿಗಳ ರಕ್ಷಣೆಯ ಗ್ಯಾರಂಟಿ ಘೋಷಿಸಲಿ: ಬಿ.ವೈ ವಿಜಯೇಂದ್ರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts