ಮಿರಾಜ್ ಜೆಟ್​ ಸಾಮರ್ಥ್ಯಕ್ಕೆ ಮನಸೋತು ಮಗುವಿಗೆ ಮಿರಾಜ್​ ಎಂದು ಹೆಸರಿಟ್ಟ ಪೋಷಕರು

ಅಜ್ಮೇರ್(ರಾಜಸ್ಥಾನ)​: ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್​ನ ಬಾಳಾಕೋಟ್​ನಲ್ಲಿದ್ದ ಉಗ್ರರ ಅಡುಗುತಾಣಗಳನ್ನು ಹೊಡೆದುರುಳಿಸಲು ನೆರವಾದ ವಾಯು ಸೇನೆಯ ‘ಮಿರಾಜ್’ ಜೆಟ್​ ವಿಮಾನದ ಸಾಮರ್ಥ್ಯಕ್ಕೆ ಮಾರುಹೋಗಿರುವ ರಾಜಸ್ಥಾನದ ಪೋಷಕರು ತಮ್ಮ ಮಗುವಿಗೆ ಮಿರಾಜ್ ಎಂದು ಹೆಸರಿಟ್ಟು ಗೌರವ ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಗುವಿನ ತಂದೆ ಎಸ್​.ಎಸ್​.ರಾಥೋಡ್​, ಪಾಕ್​ ಮೇಲೆ ದಾಳಿ ಮಾಡಿದ ಮೀರಜ್​ ಜೆಟ್ ವಿಮಾನದ ಸ್ಮರಣಾರ್ಥವಾಗಿ​ ನಮ್ಮ ಮಗುವಿಗೆ ನಾವು ಮಿರಾಜ್ ರಾಥೋಡ್​ ಎಂದು ನಾಮಕರಣ ಮಾಡಿದ್ದೇವೆ. ಅವನು ಬೆಳೆದು ದೊಡ್ಡವನಾದ ಮೇಲೆ ಸೇನೆಗೆ ಸೇರುತ್ತಾನೆ ಎಂದು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.

ಫೆ.14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರಿದ್ದ ವಾಹನವನ್ನು ಗುರಿಯಾಗಿರಿಸಿಕೊಂಡು ಜೈಷ್​ ಎ ಮಹಮ್ಮದ್​ ಉಗ್ರ ಸಂಘಟನೆ ದಾಳಿ ನಡೆಸಿತ್ತು. ದಾಳಿಯಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾಕ್​ ಬಾಳಾಕೋಟ್​ನಲ್ಲಿದ್ದ ಉಗ್ರರ ಅಡಗುತಾಣಗಳನ್ನು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಸೇನೆ ಹೊಡೆದುರುಳಿಸಿದೆ. (ಏಜೆನ್ಸೀಸ್​)