ರಹಾನೆ ಬ್ಯಾಟ್​ನಲ್ಲಿ ದ್ರಾವಿಡ್ ಹಸ್ತಾಕ್ಷರ!

ಪರ್ತ್​: ಆಸೀಸ್ ಟೆಸ್ಟ್ ಸರಣಿಯಲ್ಲಿ ತನ್ನ ಎಂದಿನ ಕ್ಲಾಸ್ ಫಾರ್ಮ್​ಗೆ ಮರಳಿರುವ ಅಜಿಂಕ್ಯ ರಹಾನೆ ಪರ್ತ್​ನಲ್ಲಿ ಶನಿವಾರ ಬಿರುಸಿನ ಬ್ಯಾಟಿಂಗ್​ನಿಂದ ಗಮನ ಸೆಳೆದರು. ರಹಾನೆ ಈ ಇನಿಂಗ್ಸ್ ಆಡಿದ ಬ್ಯಾಟ್ ವಿಶೇಷವಾಗಿತ್ತು. ಯಾಕೆಂದರೆ ಇದರಲ್ಲಿ ದಿಗ್ಗಜ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಹಸ್ತಾಕ್ಷರವಿದೆ. ‘ಶುಭ ಹಾರೈಕೆಗಳು’ ಎಂದು ದ್ರಾವಿಡ್ ಇದರಲ್ಲಿ ಬರೆದಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದ ಚೇತೇಶ್ವರ ಪೂಜಾರ ಬಳಸಿದ್ದ ಬ್ಯಾಟ್​ನ ಹಿಂಭಾಗದಲ್ಲಿ ದ್ರಾವಿಡ್ ಆಟೋಗ್ರಾಫ್ ಇತ್ತು ಎನ್ನುವುದು ವಿಶೇಷ.