ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಗೆ ಇಂದು ಜನ್ಮದಿನದ ಸಂಭ್ರಮ!

ಮುಂಬೈ: ಮಾಜಿ ವಿಶ್ವ ಸುಂದರಿ, ಕನ್ನಡತಿ ಐಶ್ವರ್ಯಾ ರೈ ಅವರಿಗೆ ಇಂದು 45ನೇ ಜನ್ಮ ದಿನದ ಸಂಭ್ರಮಾಚರಣೆ.

45 ವರ್ಷವಾದರೂ ಇನ್ನೂ ಇಪ್ಪತ್ತರ ಚೆಲುವೆಯಂತೆ ಯುವತಿಯರಿಗೆ ಸ್ಫೂರ್ತಿಯಾಗಿರುವ ಐಶ್ವರ್ಯಾ ತಮ್ಮ ಹುಟ್ಟು ಹಬ್ಬವನ್ನು ಕುಟುಂಬದವರು ಮತ್ತು ಕೆಲ ಸ್ನೇಹಿತರೊಂದಿಗೆ ಆಚರಿಸಿದ್ದು, ಇನ್​ಸ್ಟಾಗ್ರಾಂನಲ್ಲಿ ಕೆಲ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ.

View this post on Instagram

💖🤗✨🌈😍

A post shared by AishwaryaRaiBachchan (@aishwaryaraibachchan_arb) on

ತಾಯಿ ಬೃಂದ್ಯಾ ರೈ, ಪತಿ ಅಭಿಷೇಕ್​ ಬಚ್ಚನ್​ ಮತ್ತು ಪುತ್ರಿ ಆರಾಧ್ಯಾ ಜತೆ ಫೋಟೋಗೆ ಪೋಸ್​ ನೀಡಿರುವ ಐಶ್​, ಶ್ವೇತವರ್ಣದ ಬಟ್ಟೆ ಧರಿಸಿ ವಿಶ್ವ ಸುಂದರಿಯಂತೆಯೇ ಮಿಂಚಿದ್ದಾರೆ.

View this post on Instagram

💖✨LOVE😍🌈🤗

A post shared by AishwaryaRaiBachchan (@aishwaryaraibachchan_arb) on

ಐಶ್ವರ್ಯಾಗೆ ಪತಿ ಅಭಿಷೇಕ್​ ಬಚ್ಚನ್​ ಕೂಡ ಇನ್​ಸ್ಟಾಗ್ರಾಂನಲ್ಲಿ ಶುಭಾಷಯ ಕೋರಿದ್ದು, “ಹ್ಯಾಪಿ ಬರ್ತ್​ಡೇ ವೈಫ್​… ಐ ಲವ್​ ಯೂ. ನನ್ನ ಖುಷಿಯಾದ ಜಾಗ” ಎಂದು ಬರೆದು ಐಶ್ವರ್ಯಾ ಜತೆಗಿನ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

View this post on Instagram

💫

A post shared by AishwaryaRaiBachchan (@aishwaryaraibachchan_arb) on

View this post on Instagram

😍🌟💖

A post shared by AishwaryaRaiBachchan (@aishwaryaraibachchan_arb) on