ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ಇಬ್ಬರು ದೂರವಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ. ಹರಿದಾಡುತ್ತಿರುವ ಈ ಸುದ್ದಿಯಲ್ಲಿನ ಸತ್ಯಾಸತ್ಯತೆ ಅಭಿಷೇಕ್ ಮತ್ತು ಐಶ್ವರ್ಯ ಅವರಿಗೆ ಗೊತ್ತಾದರೂ ಸದ್ಯಕ್ಕೆ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ಅಭಿಷೇಕ್ ಬಚ್ಚನ್ ಜೊತೆ ತೆರೆಹಂಚಿಕೊಂಡಿದ್ದ ನಾಯಕಿ ಕಾರಣವೆಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಅಭಿಷೇಕ್ ಬಚ್ಚನ್, 2021ರ ಆಸು ಪಾಸು ಚಿತ್ರವೊಂದನ್ನು ಮಾಡಿದ್ದರು. ಆ ಚಿತ್ರದ ಹೆಸರು ದಸವಿ. ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ನಾಯಕಿಯ ಪಾತ್ರಗಳನ್ನು ನಿರ್ವಹಿಸಿದ್ದರು. ಈ ಚಿತ್ರವೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಂಸಾರದಲ್ಲಿ ಬಿರುಕು ಮೂಡಲು ಕಾರಣ ಅನ್ನೋದು ಸದ್ಯ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರೋ ಮಾತುಗಳು. ಚಿತ್ರದ ಸಮಯದಲ್ಲಿ ನಿಮ್ರತ್ ಕೌರ್ ಸೌಂದರ್ಯಕ್ಕೆ ಅಭಿಷೇಕ್ ಬಚ್ಚನ್ ಮನ ಸೋತಿದ್ದರು. ಹಾಗೆಯೇ ಇಬ್ಬರ ನಡುವೆ ಪ್ರೀತಿಯೂ ಇತ್ತು ಎನ್ನಲಾಗುತ್ತಿದೆ.
ಅಭಿಷೇಕ್ ಬಚ್ಚನ್ ತಮಗೆ ಮೋಸ ಮಾಡುತ್ತಿರುವ ವಿಚಾರ ಐಶ್ವರ್ಯ ರೈ ಅವರಿಗೆ ಗೊತ್ತಾಯಿತು. ಹಾಗಾಗಿ ಇಬ್ಬರ ಪ್ರೀತಿಯ ವಿಚಾರ ಹಾಗು ಇಬ್ಬರೂ ಭೇಟಿಯಾಗುತ್ತಿರೋದು ಐಶ್ವರ್ಯಾಗೆ ಇಷ್ಟವಿರಲಿಲ್ಲ. ಈ ವಿಚಾರವಾಗಿಯೇ ಅಭಿಷೇಕ್ ಐಸ್ವರ್ಯ ನಡುವೆ ಸರಿಪಡಿಸಲಾಗದಂತಹ ದೊಡ್ಡ ಜಗಳವೂ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಈ ಕಾರಣಕ್ಕೆ ಮನೆಯನ್ನು ಖಾಲಿ ಮಾಡಿದ ಐಶ್ವರ್ಯ ರೈ ಸದ್ಯ ತಮ್ಮ ಮಗಳು ಆರಾಧ್ಯ ಮತ್ತು ತಾಯಿಯ ಜೊತೆ ಪ್ರತೈಕವಾಗಿ ವಾಸ ಮಾಡುತ್ತಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ಬಳಕೆದಾರರೊಬ್ಬರು ವಿಚಾರವನ್ನು ಪೋಸ್ಟ್ ಮಾಡಿದ್ದಾರೆ.
ಹಾಗಾಗಿಯೇ ಅನೇಕರು ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ಅವರ ಹಳೆಯ ಸಂದರ್ಶನವನ್ನ ತೆಗೆದು ಹುಡುಕಿ ಪೋಸ್ಟ್ ಮಾಡುತ್ತಿದ್ದಾರೆ. ಆದ್ದರಿಂದ ಅನೇಕರು ಅಭಿಷೇಕ್ ಮತ್ತು ಐಶ್ವರ್ಯ ನಡುವೆ ಬಂದ ಆ ಮೂರನೇ ವ್ಯಕ್ತಿ ನಿಮ್ರತ್ ಕೌರ್ ಅಂತಲೇ ವಿಚಾರ ಹರಿದಾಡುತ್ತಿದೆ.