More

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ

  ಬೆಂಗಳೂರು: ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಅರ್ಜುನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಮದುವೆ ಫೋಟೋಸ್ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ

  ಜೂನ್ 10ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಟಿ ಮದುವೆಯ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಅರ್ಜುನ್ ತಮಿಳಿನ ನಟ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರನ್ನು ಮದುವೆಯಾಗಿದ್ದಾರೆ.

  ಐಶ್ವರ್ಯಾ ಅರ್ಜುನ್ ಅವರು ಸುಂದರವಾದ ಕೆಂಪು ಬಣ್ಣದ ಸೀರೆ ಉಟ್ಟಿದ್ದರೆ, ಉಮಾಪತಿ ರಾಮಯ್ಯ ಅವರು ಪಂಚೆ ಶರ್ಟ್ ಶಲ್ಯ ಧರಿಸಿದ್ದರು. ನಟಿ ಮದುವೆಯ ಫೋಟೋಸ್ ಶೇರ್ ಮಾಡಿ 10.06.2024 ಎಂದಷ್ಟೇ ಬರೆದಿದ್ದಾರೆ. ಅದರೊಂದಿಗೆ ಎವಿಲ್ ಐ ಎಮೋಜಿ ಹಾಕಿದ್ದಾರೆ.

  ಐಶ್ವರ್ಯಾ ಮತ್ತು ಉಮಾಪತಿ ಟಿವಿ ಕಾರ್ಯಕ್ರಮವೊಂದರಲ್ಲಿ ಪರಿಚಯವಾದ್ರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಈ ವಿಚಾರವನ್ನು ಹಿರಿಯರ ಗಮನಕ್ಕೆ ತಂದಾಗ ಇಬ್ಬರ ಮನೆಯವರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts