ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದವನ ಬ್ಯಾಗ್​ನಲ್ಲಿ ಇದ್ದಿದ್ದು ಪುಟ್ಟಪುಟ್ಟ ಹಕ್ಕಿಗಳು !

ಪ್ಯಾರಿಸ್​: ಬ್ಯಾಗ್​ನಲ್ಲಿ 80 ಚಿಕ್ಕ ಚಿಕ್ಕ ಹಕ್ಕಿಗಳನ್ನು ಇಟ್ಟುಕೊಂಡು ಮೆಕ್ಸಿಕೋದಿಂದ ವಿಮಾನದಲ್ಲಿ ಆಗಮಿಸಿದ ಆಸ್ಟ್ರಿಯನ್​ ವ್ಯಕ್ತಿಯನ್ನು ಪ್ಯಾರಿಸ್​ ಏರ್​ಪೋರ್ಟ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ಯಾರಿಸ್​ನ ರೋಸಿ ಏರ್​ಪೋರ್ಟ್​ನಲ್ಲಿ ಆ ವ್ಯಕ್ತಿಯನ್ನು ಬಂಧಿಸಿದಾಗ ಆತನ ಬ್ಯಾಗ್​ನಲ್ಲಿದ್ದ ಪಕ್ಷಿಗಳಲ್ಲಿ ಸುಮಾರು 55 ಮೃತಪಟ್ಟಿದ್ದು ಉಳಿದೆಲ್ಲ ಜೀವಂತವಾಗಿಯೇ ಇದ್ದವು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಆ ಪುಟ್ಟ ಹಕ್ಕಿಗಳನ್ನು ಬಾಕ್ಸ್​ನಲ್ಲಿ ಹಾಕಿ ಮೂರು ಬ್ಯಾಗ್​ಗಳಲ್ಲಿ ಇಟ್ಟುಕೊಂಡಿದ್ದ.
ಆಸ್ಟ್ರಿಯನ್​ ಮೂಲದ ಈತ ಹಕ್ಕಿಗಳನ್ನು ಸಂಗ್ರಹಿಸುವ ಹುಚ್ಚು ಬೆಳೆಸಿಕೊಂಡಿದ್ದ. ಈಗಾಗಲೇ ಆತನ ವಿರುದ್ಧ ಜರ್ಮನಿ ಕೋರ್ಟ್​ನಲ್ಲೂ ಪ್ರಕರಣ ದಾಖಲಾಗಿದೆ.

ಹೆಚ್ಚಾಗಿ ಮಕರಂದಗಳನ್ನು ತಿನ್ನುವ ಪುಟ್ಟಪುಟ್ಟ ಹಕ್ಕಿಗಳನ್ನೇ ಸಂಗ್ರಹ ಮಾಡಿದ್ದು, ವಿಮಾನ ಹಾರಾಟದ ಸಮಯದಲ್ಲಿ ಉಸಿರಾಟಕ್ಕೆ ತೊಂದರೆಯಾಗಿ ಸತ್ತಿರಬಹುದು ಎಂದು ಪೊಲೀಸರು ಹೇಳಿದ್ದಾರೆ.