More

    ವಿಮಾನ ನಿಲ್ದಾಣಕ್ಕೆ ‘ಭೂಮಿಪುತ್ರ’ ಹೆಸರಿಡಿ

    ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣಕ್ಕೆ ‘ಭೂಮಿಪುತ್ರ’ ಎಂದು ಮರುನಾಮಕರಣ ಮಾಡುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಕುಸ್ತಿಗಿರಿ ಕಮಿಟಿ ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

    ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ನಿಟ್ಟಿನಲ್ಲಿ ಆಯಾ ಜಿಲ್ಲಾಡಳಿತಗಳಿಂದ ಐತಿಹಾಸಿಕ ವ್ಯಕ್ತಿಗಳು, ಸ್ವಾತಂತ್ರೃ ಹೋರಾಟಗಾರರ ಹೆಸರುಗಳ ಮಾಹಿತಿ ಕೇಳಿರುವ ಬೆನ್ನಲ್ಲೇ ಕೆಲವರು ರಾಣಿಚನ್ನಮ್ಮ, ಶಿವಾಜಿ, ಸಂಗೊಳ್ಳಿ ರಾಯಣ್ಣ, ಬಾಬಾಸಾಹೇಬ ಅಂಬೇಡ್ಕರ್ ಹೀಗೆ ವಿವಿಧ ಹೆಸರುಗಳನ್ನು ಉಲ್ಲೇಖಿಸುತ್ತಿದ್ದಾರೆ.

    ಹಲವು ದಶಕಗಳಿಂದ ಸಾಂಬ್ರಾ ಹೆಸರಿನ ಮೇಲೆ ಕರೆದುಕೊಂಡು ಬರಲಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಸರ್ಕಾರ ಇದೀಗ ಮರುನಾಮಕರಣ ಮಾಡುವ ಬಗ್ಗೆ ಪ್ರಸ್ತಾಪ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರೈತರು ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿ ನೀಡಿದ್ದಾರೆ. ಆದ್ದರಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ‘ಭೂಮಿಪುತ್ರ’ ಎಂದು ನಾಮಕರಣ ಮಾಡಬೇಕು ಎಂದು ವಿನಂತಿಸಿದರು.
    ಸರ್ಕಾರವು ಒಂದು ವೇಳೆ ಐತಿಹಾಸಿಕ ವ್ಯಕ್ತಿಗಳ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಾಮಕರಣ ಮಾಡುವುದಾದಲ್ಲಿ ಆ ಹೆಸರಿನಲ್ಲಿ ಸಾಂಬ್ರಾ ಎಂದು ಸೇರ್ಪಡೆ ಮಾಡಬೇಕು. ಇದರಿಂದಾಗಿ ನಿಲ್ದಾಣಕ್ಕೆ ಭೂಮಿ ಕೊಟ್ಟ ಗ್ರಾಮದ ಹೆಸರನ್ನು ಉಳಿಸಿದಂತಾಗುತ್ತದೆ. ಜತೆಗೆ ಸಾಂಬ್ರಾ ಏರ್‌ಫೋರ್ಸ್ ತರಬೇತಿ ಕೇಂದ್ರ ಎಂದು ನಾಮಕರಣ ಮಾಡಬೇಕು ಎಂದರು.

    ರಸ್ತೆ ದುರಸ್ತಿಗೊಳಿಸಿ: ಕಳೆದ ನಾಲ್ಕು ತಿಂಗಳಿಂದ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಜಮೀನುಗಳ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಿ ಕೃಷಿ ಚಟುವಟಿಕೆ ಮಾಡಲು ಕಷ್ಟವಾಗುತ್ತಿದೆ. ಹೀಗಾಗಿ ಕೃಷಿ ಭೂಮಿಯ ಸಂಪರ್ಕ ರಸ್ತೆಗಳನ್ನು ಶೀಘ್ರವೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಯಲ್ಲಪ್ಪ ಹರ್ಜಿ, ಲಕ್ಷ್ಮಣ ಸುಳೇಭಾವಿ, ನಿತಿನ್ ಚಿಂಗಳಿ, ಭರಮಾ ಚಿಂಗಳಿ, ಮಹೇಂದ್ರ ಗೊಟೆ, ಕೃಷ್ಣ ಜೋಯಿ, ಮೋಹನ ಹರ್ಜಿ, ಮಹೇಶ ಜತ್ರಾಟಿ ಇತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts