ನಾಳೆಯಿಂದ ವಾಯುಸೇನೆ ನೇಮಕಾತಿ ರ‍್ಯಾಲಿ

ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ಜು.17ರಿಂದ 22ರವರೆಗೆ ವಾಯುಸೇನೆ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದೆ.

ಪ್ರತಿದಿನ ಕನಿಷ್ಠ 2 ಸಾವಿರ ಅಭ್ಯರ್ಥಿಗಳಂತೆ ಒಟ್ಟು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿ ರುವ ಆಸಕ್ತ ಅಭ್ಯರ್ಥಿ ಗಳು ನೇಮಕಾತಿ ದಿನ ದಾಖಲೆಗಳೊಂದಿಗೆ ಹಾಜರಾಗಿ ನೋಂದಣಿ ಮಾಡಿಕೊಳ್ಳಬಹುದು. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿ ಗಳಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರ್ಯಾಲಿಯಲ್ಲಿ ಭಾಗವಹಿಸುವವರಿಗೆ ಸ್ನಾನ ಹಾಗೂ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಊಟ, ಉಪಾಹಾರಕ್ಕೆ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಅಗತ್ಯ ಮಾರ್ಗದರ್ಶನ ನೀಡಲು 50 ವಿದ್ಯಾರ್ಥಿಗಳ ತಂಡ ರಚಿಸಲಾಗಿದೆ. ಈ ವಿದ್ಯಾರ್ಥಿಗಳು ದಿನದ 24 ತಾಸು ನೆಹರು ಕ್ರೀಡಾಂಗಣದಲ್ಲಿದ್ದು ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು. ರ‍್ಯಾಲಿ ಸ್ಥಳದಲ್ಲಿ ದಾಖಲೆಗಳ ಜೆರಾಕ್ಸ್ ಮಾಡಿಸಿಕೊಳ್ಳಲು, ಛಾಯಾಚಿತ್ರ ತೆಗೆಯಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಮಾಹಿತಿಗೆ ಸಂರ್ಪಸಿ
  1. ವಿಜಯಕುಮಾರ್ (9480282555)
  2. ಶಿವಮೂರ್ತಿ (9880867840)
ಫೇಲಾದರೂ ಉದ್ಯೋಗ!

ವಾಯುಸೇನಾ ನೇಮಕಾತಿ ರ್ಯಾಲಿಯಲ್ಲಿ ಉತ್ತೀರ್ಣರಾದವರೆಲ್ಲರಿಗೂ ಉದ್ಯೋಗ ಸಿಗುವುದು ಖಚಿತ. ಆದರೆ, ಇಲ್ಲಿ ಅನುತ್ತೀರ್ಣ ರಾದವರಲ್ಲೂ ಕೆಲವರನ್ನು ಆಯ್ಕೆ ಮಾಡಿ ಉದ್ಯೋಗ ನೀಡಲು ಅಲ್ಪಾ ಟೆಕ್ ಅಕಾಡೆಮಿ ಎಂಬ ಕಂಪನಿ ಮುಂದೆ ಬಂದಿದೆ. ಕಂಪನಿ ಅಧಿಕಾರಿಗಳೂ ರ‍್ಯಾಲಿ ವೇಳೆ ಉಪಸ್ಥಿತರಿರುತ್ತಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಯಾವಾಗ? ಯಾರಿಗೆ? ಪರೀಕ್ಷೆ
  1. 17-18: ಗ್ರೂಪ್ ವೈ ನೇಮಕಾತಿಗೆ ದೈಹಿಕ ಹಾಗೂ ಲಿಖಿತ ಪರೀಕ್ಷೆ. ( ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರ ಕನ್ನಡ).
  2. 19-20: ಗ್ರೂಪ್ ವೈ (ವೈದ್ಯಕೀಯ ಸಹಾಯಕ)-ರಾಜ್ಯದ ಎಲ್ಲ 30 ಜಿಲ್ಲೆಗಳು.
  3. 21-22: ಗ್ರೂಪ್ ವೈ- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆ.

Leave a Reply

Your email address will not be published. Required fields are marked *