ಆಟೋಗಿಂತಲೂ ವಿಮಾನ ಪ್ರಯಾಣವೇ ಅಗ್ಗ ಎಂದ ವಿಮಾನಯಾನ ಸಚಿವ

ಗೋರಖ್​ಪುರ: ಇತ್ತೀಚಿನ ದಿನಗಳಲ್ಲಿ ಆಟೋ ರೀಕ್ಷಾ ಪ್ರಯಾಣಕ್ಕಿಂತಲೂ ವಿಮಾನ ಪ್ರಯಾಣದ ಟಿಕೆಟ್​ ಬೆಲೆಯೇ ಆ
ಅಗ್ಗವಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಇಲಾಖೆಯ ರಾಜ್ಯ ಸಚಿವ ಜಯಂತ್​ ಸಿನ್ಹಾ ಹೇಳಿದ್ದಾರೆ.

ಗೋರಖ್​ಪುರ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್​ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ” ಇಂದು ವಿಮಾನ ಯಾನ ಎಷ್ಟು ಅಗ್ಗವಾಗಿ ಎಂದರೆ, ಅದು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವುದಕ್ಕಿಂತಲೂ ಕಡಿಮೆ ಖರ್ಚಿನದ್ದಾಗಿದೆ. ಅದು ಹೇಗೆ ಎಂದು ನೀವು ಕೇಳಬಹುದು? ಇಬ್ಬರು ವ್ಯಕ್ತಿಗಳು ಒಂದು ಆಟೋದಲ್ಲಿ ಪ್ರಯಾಣಿಸಿ 10 ರೂ.ಗಳನ್ನು ನೀಡಿದರು ಎಂದಾದರೆ, ಅವರು ಒಂದು ಕಿ.ಮೀಗೆ ಐದು ರೂಪಾಯಿ ಪಾವತಿಸಿದ್ದಾರೆ ಎಂದರ್ಥ. ಆದರೆ, ನೀವು ವಿಮಾನದಲ್ಲಿ ಪ್ರಯಾಣಿಸಿದರೆ ಕಿಲೊ ಮೀಟರ್​ಗೆ ನೀಡುವುದು 4 ರೂ. ಮಾತ್ರ,” ಎಂದು ವಿಮಾನಯಾನ ಅತ್ಯಂತ ಅಗ್ಗ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.

ಮೋದಿ ಅಧಿಕಾರಕ್ಕೆ ಬಂದ ಮೇಲೆ ವಿಮಾನಯಾನ ರಂಗ ಹೆಚ್ಚಿನ ಅಭಿವೃದ್ಧಿ ಕಂಡಿದೆ. ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ 2018ರಲ್ಲಿ ದುಪ್ಪಟ್ಟಾಗಿದೆ ಎಂದೂ ಜಯಂತ್​ ಸಿನ್ಹಾ ಹೇಳಿದರು.