More

    ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಹೊತ್ತಿದ್ದ ಏರ್​ ಇಂಡಿಯಾದ ಹಿರಿಯ ಪೈಲಟ್​ ಮರಳಿ ಕೆಲಸಕ್ಕೆ

    ನವದೆಹಲಿ: ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಅಮಾನತುಗೊಂಡಿದ್ದ ಏರ್​ ಇಂಡಿಯಾದ ಹಿರಿಯ ಪೈಲಟ್​ ಒಬ್ಬರು ಮತ್ತೆ ಕೆಲಸಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನಯಾನ ಆಂತರಿಕ ದೂರುಗಳ ಸಮಿತಿಯು ಆರೋಪಿ ಕ್ಯಾಪ್ಟನ್​ ಸಚಿನ್​ ಗುಪ್ತಾ ಅವರಿಗೆ ದಂಡ ವಿಧಿಸಿದೆ. ಏರ್​ ಇಂಡಿಯಾದ ಪ್ರಾದೇಶಿಕ ನಿದೇರ್ಶಕ ಪಿ.ಎಸ್. ನೇಗಿ, ವಿಮಾನಯಾನ ಆಂತರಿಕ ಸಮಿತಿ ಈ ಬಗ್ಗೆ ತನಿಖೆ ನಡೆಸಿತ್ತು.

    ಸೇವಾ ನಿಯಮಗಳಂತೆ ಕ್ಯಾಪ್ಟನ್ ಸಚಿನ್ ಗುಪ್ತಾ ಅವರು ಶಿಕ್ಷೆಯ ವಿರುದ್ಧ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಯನ್ನು ಪ್ರಾಧಿಕಾರವು ಪರಿಶೀಲಿಸುತ್ತದೆ ಎಂದು ನೇಗಿ ಹೇಳಿದರು.

    ಸಚಿನ್ ಗುಪ್ತಾ ಅವರನ್ನು ಮತ್ತೆ ಬೋಧಕರನ್ನಾಗಿ ನೇಮಿಸಲಾಗಿದೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಸಚಿನ್​ ಗುಪ್ತಾ ಅವರನ್ನು ಅಮಾನತುಗೊಳಿಸಿದ್ದಾಗ ತನಿಖೆ ಮುಗಿಯುವವರೆಗೆ ಲಿಖಿತ ಅನುಮತಿ ಇರದ ಹೊರತು ಏರ್​ ಇಂಡಿಯಾದ ಆವರಣದೊಳಗೆ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts