25.8 C
Bangalore
Monday, December 9, 2019

ವಾಯುಪಡೆಗೆ ಅತ್ಯಾಧುನಿಕ ಸ್ಪೈಸ್ 2000: ಬಾಲಾಕೋಟ್ ಸರ್ಜಿಕಲ್ ದಾಳಿ ವೇಳೆ ಬಳಸಿದ ಬಾಂಬ್​ಗಿಂತಲೂ ಶಕ್ತಿಶಾಲಿ

Latest News

ಹುಣಸೂರಿನಲ್ಲಿ ಹಳ್ಳಿಹಕ್ಕಿಗೆ ಮನೆ ಗೂಡಿನ ದಾರಿ ತೋರಿದ ಎಚ್.ಪಿ.ಮಂಜುನಾಥ್

ಹುಣಸೂರು: ಹಳ್ಳಿಹಕ್ಕಿ ಎಚ್​​.ವಿಶ್ವನಾಥ್ ಕಾಂಗ್ರೆಸ್​ ಅಭ್ಯರ್ಥಿ ಎಚ್​​.ಪಿ ಮಂಜುನಾಥ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಎಚ್​.ಪಿ ಮಂಜುನಾಥ್, ಜಿಜೆಪಿಯ ಎಚ್​....

ಉಪ ಚುನಾವಣೆ ಗೆಲುವಿಗೆ ವಿಜಯೋತ್ಸವ – ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ವಿತರಣೆ ಬಣ್ಣ ಎರಚಿ ಸಂಭ್ರಮ

ಬಳ್ಳಾರಿ: ವಿಜಯನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ 30125 ಮತಗಳ ಅಂತರದಿಂದ ಗೆಲ್ಲುತ್ತಿದ್ದಂತೆ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ಮತ...

ಲಸಿಕೆ ಹಾಕಿಸಿ ಕಾಯಿಲೆಗಳಿಂದ ಮಕ್ಕಳ ರಕ್ಷಿಸಿ

ನಾಯಕನಹಟ್ಟಿ: ಡಿಪಿಟಿ, ಡಿಟಿ ಲಸಿಕಾ ಅಭಿಯಾನ ಡಿ.11ರಿಂದ ಆರಂಭಗೊಳ್ಳಲಿದೆ ಎಂದು ಹಿರಿಯ ಆರೋಗ್ಯ ಮೇಲ್ವಿಚಾರಕ ಶೇಷಾದ್ರಿ ತಿಳಿಸಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ...

ಬೈ ಎಲೆಕ್ಷನ್​ ರಿಸಲ್ಟ್​ | ಜಿದ್ದಾಜಿದ್ದಿನ ಯಶ ಬಿಜೆಪಿ ಪಾಲು; ರೆಬೆಲ್​ ಶಾಸಕ ಸೋಮಶೇಖರ್​ಗೆ ಒಲಿದ ಯಶವಂತಪುರ

ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಮತ ಎಣಿಕೆಯ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ರಾಜ್ಯದ ಗಮನ ಸೆಳೆದಿತ್ತು. ಕೊನೆಗೆ ಬಿಜೆಪಿಯ ಎಸ್​.ಟಿ. ಸೋಮಶೇಖರ್​ 1,44,722 ಮತ ಪಡೆದು ಜಯಶಾಲಿಯಾಗಿದ್ದಾರೆ. ಚುನಾವಣೆ ಘೋಷಣೆಯಾದಗಿನಿಂದಲೂ...

ಕೊಟ್ಟೂರಲ್ಲಿ ಕ್ಲೀನ್ ರಸ್ತೆಗೆ ಮುಂದಾದ ಪಪಂ

ಕೊಟ್ಟೂರು: ಧೂಳು ಮುಕ್ತ ಪಟ್ಟಣವನ್ನಾಗಿಸಲು ಸ್ಥಳೀಯ ಪಪಂ ನಿತ್ಯ ರಸ್ತೆ ಬದಿಯ ನುಸಿ ಮಣ್ಣನ್ನು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುತ್ತಿದೆ. ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ...

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್​ನ ಉಗ್ರರ ನೆಲೆಗಳ ಮೇಲಿನ ದಾಳಿಗೆ ಬಳಸಲಾಗಿದ್ದ ಇಸ್ರೇಲ್ ನಿರ್ವಿುತ ‘ಸ್ಪೈಸ್ 2000’ ಬಾಂಬ್​ನ ಆಧುನಿಕ ಆವೃತ್ತಿ ಖರೀದಿಸಲು ಭಾರತೀಯ ವಾಯುಪಡೆ ನಿರ್ಧರಿಸಿದೆ. ಯಾವುದೇ ಕಟ್ಟಡ ಅಥವಾ ಬಂಕರ್​ಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡುವ ಸಾಮರ್ಥ್ಯವನ್ನು ಈ ಬಾಂಬ್ ಹೊಂದಿದೆ.

ಸ್ಪೈಸ್ 2000 ಆಧುನಿಕ ಬಾಂಬ್​ನ್ನು ಬಂಕರ್ ಬಸ್ಟರ್ ಅಥವಾ ಬಿಲ್ಡಿಂಗ್ ಡೆಸ್ಟ್ರಾಯರ್ ಎಂದೂ ಕರೆಯಲಾಗುತ್ತದೆ. ಈ ಬಾಂಬ್​ಗೆ ಅಳವಡಿಕೆ ಮಾಡಲಾಗುವ ಮಾರ್ಕ್ 84 ಸಿಡಿತಲೆ ಗುರಿಯನ್ನು ನಿಖರವಾಗಿ ತಲುಪುತ್ತದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಭದ್ರತಾ ಸಲಕರಣೆ ಪೂರೈಸುವಲ್ಲಿ ಇಸ್ರೇಲ್ ಮಹತ್ವದ ಪಾಲುದಾರ ರಾಷ್ಟ್ರವಾಗಿದೆ. ಈಗಾಗಲೇ ಹಲವು ಅತ್ಯಾಧುನಿಕ ಭದ್ರತಾ ಉಪಕರಣಗಳನ್ನು ಭಾರತಕ್ಕೆ ನೀಡಿದೆ. ಸ್ಪೈಸ್ 2000 ಹೊಸ ಬಾಂಬ್​ಗಳನ್ನು ಭಾರತಕ್ಕೆ ಮಾರಾಟ ಮಾಡಲು ಇಸ್ರೇಲ್ ಕೂಡ ಉತ್ಸುಕವಾಗಿದೆ ಎನ್ನಲಾಗಿದೆ.

ನೇರ ಖರೀದಿಗೆ ಅವಕಾಶ

ಸೇನೆಯ ಮೂರು ವಿಭಾಗಗಳಾದ ಭೂ, ವಾಯು ಹಾಗೂ ನೌಕಾಪಡೆಗೆ ತುರ್ತು ಅಧಿಕಾರ ನೀಡಲಾಗಿದೆ. ಇದರ ಅನ್ವಯ ಶತ್ರುಗಳ ಬೆದರಿಕೆ ಎದುರಿಸಲು 300 ಕೋಟಿ ರೂ. ವರೆಗಿನ ಭದ್ರತಾ ಸಲಕರಣೆಗಳನ್ನು ನೇರವಾಗಿ ಖರೀದಿಸಬಹುದು. ಸರ್ಕಾರದ ಅನುಮತಿ, ಇನ್ನಿತರ ಪ್ರಕ್ರಿಯೆಗಳಿಗೆ ಕಾಯುವ ಅಗತ್ಯ ಇರುವುದಿಲ್ಲ. ಈಗ ಇದೇ ಅಧಿಕಾರ ಬಳಸಿಕೊಂಡು ಸ್ಪೈಸ್ 2000 ಬಾಂಬ್ ಖರೀದಿಸಲು ವಾಯುಪಡೆ ನಿರ್ಧರಿಸಿದೆ.

ಏನಿದು ಅತ್ಯಾಧುನಿಕ ಬಾಂಬ್?

ಬಾಲಾಕೋಟ್ ದಾಳಿಗೆ ಬಳಸಲಾಗಿದ್ದ ಸ್ಪೈಸ್ 2000 ಬಾಂಬ್ ಪೆನೆಟ್ರೇಟರ್ ಮಾದರಿಯದ್ದಾಗಿತ್ತು. ಇದು ಕಟ್ಟಡಕ್ಕೆ ರಂಧ್ರ ಮಾಡಿ, ಒಳ ನುಸುಳಿ ಸ್ಫೋಟ ನಡೆಸಿತ್ತು. ಪ್ರತಿ ಬಾಂಬ್​ಗೆ ಸುಮಾರು 70-80 ಕೆಜಿ ಸ್ಪೋಟಕ ಬಳಕೆ ಮಾಡಿದ್ದ ಕಾರಣ, ಕಟ್ಟಡದ ಒಳಗಿದ್ದ ಉಗ್ರರು ಹತರಾಗಿದ್ದರು. ಆದರೆ ಕಟ್ಟಡದ ಹೊರಭಾಗ ಸಂಪೂರ್ಣವಾಗಿ ನಾಶ ಆಗಿರಲಿಲ್ಲ. ಆದರೆ ಹೊಸ ಸ್ಪೈಸ್ 2000 ಬಾಂಬ್ ಇಡೀ ಕಟ್ಟಡ ಅಥವಾ ಬಂಕರ್​ಗಳನ್ನೇ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.

ನಡುಕ ಹುಟ್ಟಿಸಿದ್ದ ಸ್ಪೈಸ್

ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಸಹಿತ ಹಲವು ಉಗ್ರರ ನೆಲೆಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿತ್ತು. ಇಸ್ರೇಲ್ ನಿರ್ವಿುತ ಸ್ಪೈಸ್ ಬಾಂಬ್ ಬಳಕೆ ಮಾಡಲಾಗಿತ್ತು. 150ಕ್ಕೂ ಅಧಿಕ ಉಗ್ರರು ದಾಳಿಯಲ್ಲಿ ಮೃತರಾಗಿದ್ದರು ಎನ್ನಲಾಗಿದೆ.

Stay connected

278,751FansLike
584FollowersFollow
622,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...