ಪರ್ವತಾರೋಹಿಗಳ ಮೃತದೇಹ ತರಲು ತೆರಳಿದ್ದ ಚಾಪರ್​ಗೆ ಹವಾಮಾನ ಅಡ್ಡಿ, ಬರಿಗೈಯಲ್ಲಿ ಹಿಂದಿರುಗಿದ ರಕ್ಷಣಾ ತಂಡ

ಡೆಹರಾಡೂನ್​: ಉತ್ತರಾಖಂಡ್​ನ ನಂದಾ ದೇವಿ ಪರ್ವತದಲ್ಲಿ ಕಾಣೆಯಾಗಿದ್ದ ಪರ್ವತಾರೋಹಿಗಳಲ್ಲಿ ಐವರ ಮೃತ ದೇಹಗಳನ್ನು ಪತ್ತೆ ಹಚ್ಚಿದ್ದ ರಕ್ಷಣಾ ತಂಡ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸಹಾಯದಿಂದ ಮೃತದೇಹಗಳನ್ನು ಮರಳಿ ತರುವ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ.

ಬುಧವಾರ ತೆರಳಿದ್ದ ವಾಯುಪಡೆಯ ತಂಡ, ಮೃತದೇಹಗಳ ಬಳಿ ಇಳಿಯಲಾಗದೆ ಹಿಂದಕ್ಕೆ ಮರಳಿದೆ. ಗಾಳಿಯ ಸಮಸ್ಯೆಯಿಂದಾಗಿ ಮೃತ ದೇಹ ತರುವ ಕೆಲಸಕ್ಕೆ ತೊಡಕಾಗಿದೆ ಎಂದು ಪಿಥೋರಗರ್​ನ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ), ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್​ಆರ್​ಎಫ್)ದ ತಂಡದವರು 5,000 ಮೀಟರ್ ಎತ್ತರದಲ್ಲಿರುವ ಮೃತ ದೇಹಗಳನ್ನು ತರಲು ಭಾರತೀಯ ಏರ್ ಫೋರ್ಸ್​ನ (ಐಎಎಫ್) ಚಾಪರ್​ಲ್ಲಿ ತೆರಳಿದ್ದರು.

ಜಿಲ್ಲಾಡಳಿತ ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ತಂಡದವರ ಸುರಕ್ಷತೆಯ ದೃಷ್ಟಿಯಿಂದ ರಕ್ಷಣಾ ತಂಡವನ್ನು ಕಾಲ್ನಡಿಗೆಯಲ್ಲಿ ಅಲ್ಲಿಗೆ ಕಳುಹಿಸಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿಥೋರಗಢ​ ಜಿಲ್ಲೆಯ ಮ್ಯಾಜಿಸ್ಟ್ರೇಟ್​ ವಿಜಯ್ ಕುಮಾರ್ ಜೋಗ್ದಾಂಡೇ ಇದರ ಕುರಿತು ಮಾಹಿತಿ ನೀಡಿದ್ದು, ಐಟಿಬಿಪಿ ನೊಂದಿಗೆ ಚರ್ಚಿಸಿ ಪರ್ವತಾರೋಹಿಗಳ ಮೃತದೇಹಗಳನ್ನು ತರಲು ಕಾಲ್ನಡಿಗೆಯಲ್ಲಿ ತೆರಳಲು ನಿರ್ಧರಿಸಲಾಗಿದೆ. ಇದಕ್ಕೆ 15 ದಿನ ಸಮಯ ಹಿಡಿಯಬಹುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *