ನವದೆಹಲಿ: ಮುಸ್ಲಿಮರಲ್ಲಿ ಚಾಲ್ತಿಯಲ್ಲಿರುವ ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲಾದ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿದ ದಾವೆಯಲ್ಲಿ ತಮ್ಮನ್ನೂ ಸೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲ್ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ. 1997ರ ಈ ತೀರ್ಪಿನಲ್ಲಿ ಈ ವಿಚಾರದಲ್ಲಿ ಯಾವುದೇ ಪಿಟಿಷನ್ಗಳನ್ನು ಪರಿಗಣಿಸುವುದಿಲ್ಲ ಎಂದೂ ಹೇಳಿತ್ತು. ವೈಯಕ್ತಿಕ ಕಾನೂನುಗಳ ಮಾನ್ಯತೆಯನ್ನು ಶಾಸನಗಳ ಮೂಲಕವೋ ಅಥವಾ ಇನ್ನಾವುದೋ ಲಿಖಿತ ಬರೆಹಗಳ ಮೂಲಕ ಅಳೆಯಲಾಗದು ಎಂದು ಎಐಎಂಪಿಎಲ್ಬಿ ಬಿನ್ನವಿಸಿಕೊಂಡಿದೆ.
ಪವಿತ್ರವಾದ ಕುರಾನ್ ಮತ್ತು ಪ್ರವಾದಿ ಮೊಹಮ್ಮದರ ಹದಿತ್ ಅಧರಿಸಿ ಮೊಹಮ್ಮದೀಯ ಕಾನೂನು ರಚನೆಯಾಗಿರುವುದರಿಂದಾಗಿ ಸಂವಿಧಾನದ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ. ಸಂವಿಧಾನದ ಅನುಚ್ಚೇಧ 13ರಲ್ಲೂ ಇದು ಉಲ್ಲೇಖವಾಗಿದ್ದು, ಮಾನ್ಯತೆಯನ್ನು ಪರೀಕ್ಷಿಸಲಾಗದು ಎಂದು ಅದು ಅರ್ಜಿಯಲ್ಲಿ ವಿನಂತಿಸಿದೆ. (ಏಜೆನ್ಸೀಸ್)