ನೀರು ಅಮೂಲ್ಯ ಸಂಪತ್ತು

ಐಮಂಗಲ: ನೀರು ಅಮೂಲ್ಯ ಸಂಪತ್ತು, ಅದರ ಬಳಕೆ ಮಿತವಾಗಿದ್ದರೆ ಮುಂದಿನ ಪೀಳಿಗೆ ಉಳಿಯಲಿದೆ ಎಂದು ಪ್ರಾಂಶುಪಾಲ ವಿ.ಎಸ್.ಸಜ್ಜನ್ ಹೇಳಿದರು.

ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಲಶಕ್ತಿ ಅಭಿಯಾನದಲ್ಲಿ ಮಾತನಾಡಿ, ಪ್ರಕೃತಿಯಲ್ಲಿನ ಬದಲಾವಣೆಗಳಿಂದ ಮಳೆ ಕೊರತೆ ಉಂಟಾಗಿದೆ. ಇದರ ಪರಿಣಾಮ ಅಂತರ್ಜಲ ಪಾತಾಳ ಸೇರಿದೆ. ಈಗಿಂದಲೇ ಜಲ ಸಂರಕ್ಷಣೆಗೆ ಪಣ ತೊಡದಿದ್ದರೆ ಮುಂದೆ ಹನಿ ನೀರಿಗೂ ಪರದಾಡಬೇಕಾಗುತ್ತದೆ ಎಂದರು.

ನೀರು, ಪರಿಸರ ಸಂರಕ್ಷಣೆ ಎಲ್ಲರ ಆದ್ಯತೆಯಾಗಬೇಕು. ಈ ಬಗ್ಗೆ ಮಕ್ಕಳಿಗೆ ಶಿಕ್ಷಕರು ಅರಿವು ಮೂಡಿಸಬೇಕು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಮರು ಬಳಕೆ ಮಾಡುವ ಪದ್ಧತಿ ಅಗತ್ಯ ಎಂದು ತಿಳಿಸಿದರು.

ಉಪನ್ಯಾಸಕರಾದ ಎಂ.ರಮೇಶ್, ರಂಗಸ್ವಾಮಿ, ಎಸ್.ಬಿ.ರವಿ, ಪೆನ್ನಯ್ಯ, ಸಿಬ್ಬಂದಿ ಸುಧಾಮಣಿ ಹಾಗೂ ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *