ನೀರಿಗೆ ಬರ ಭವಿಷ್ಯಕ್ಕೆ ಗರ

ಐಮಂಗಲ: ನೀರಿನ ಸಂರಕ್ಷಣೆ ನಿರ್ಲಕ್ಷಿಸಿದರೆ ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾದೀತು ಎಂದು ಮುಖ್ಯಶಿಕ್ಷಕ ಜಿ.ಬಿ.ಪಂಚಾಕ್ಷರಯ್ಯ ಎಚ್ಚರಿಸಿದರು.

ಜಲ ಸಂರಕ್ಷಣೆ ಜಾಗೃತಿ ಅಂಗವಾಗಿ ಬುರುಜಿನರೊಪ್ಪದ ಶಾರದಾದೇವಿ ಪ್ರೌಢಶಾಲೆಯ ಇಕೋ ಕ್ಲಬ್ ಸೋಮವಾರ ಆಯೋಜಿಸಿದ್ದ ಜಲ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವರ ದುರಾಸೆಗೆ ಕಾಡು, ಪ್ರಕೃತಿ, ಜಲ ಮೂಲಗಳು ನಾಶವಾಗುತ್ತಿದ್ದು ಮಳೆ ಪ್ರಮಾಣ ಕಡಿಮೆಯಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆ ನೀರನ್ನು ಹರಿಯಲು ಬಿಡದೆ ಇಂಗುಗುಂಡಿ, ಕೃಷಿ ಹೊಂಡಗಳಲ್ಲಿ ಇಂಗಿಸಬೇಕು. ಮಳೆ ಕೊಯ್ಲು ಅನುಸರಿಸಿ ಜಲ ಸಂರಕ್ಷಿಸಬೇಕು. ಗಿಡ ಮರ ನೆಟ್ಟು ಪೋಷಿಸಲು ಸಲಹೆ ನೀಡಿದರು.

ಸಹ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ್, ಶಿಕ್ಷಕರಾದ ಅನಿತಾ, ಶಶಿಕಲಾ, ಲೋಹಿತ್, ದಯಾನಂದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *