ಕಲಿಕೆ ಜತೆ ಪರಿಸರ ಕಾಳಜಿ ಇರಲಿ

ಐಮಂಗಲ: ವಿದ್ಯಾರ್ಥಿಗಳು ಕಲಿಕೆ ಜತೆ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಮನೋಹರ್ ಹೇಳಿದರು.

ಹೋಬಳಿಯ ಮರಡಿಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಚ್ಛತಾ ಆಂದೋಲನದಲ್ಲಿ ಮಾತನಾಡಿ, ಪ್ರತಿ ಮಕ್ಕಳು ಒಂದೊಂದು ಗಿಡ ನೆಟ್ಟು ಪೋಷಿಸುವತ್ತ ಗಮನಹರಿಸಿ ಪಾಲಕರಲ್ಲೂ ಜಾಗೃತಿ ಮೂಡಿಸಬೇಕು ಎಂದರು.

ಚಿತ್ರ ಡಾನ್‌ಬಾಸ್ಕೋ ಜಿಲ್ಲಾ ಸಮಾಜ ಸೇವಕ ಮಹಾಂತೇಶ್ ಮಾತನಾಡಿ, ಗುಣಾತ್ಮಕ ಶಿಕ್ಷಣ ಪಡೆದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಪಿಡಿಒ ಜ್ಯೋತಿ ವೈದ್ಯನಾಥನ್, ಶಿಕ್ಷಕರಾದ ಲೋಕೇಶ್, ಮಧು, ಕನಕಲಕ್ಷ್ಮೀ, ಫರ್‌ಹೀನ್‌ತಾಜ್, ಮಹೇಶ್, ಸಂಗಯ್ಯ, ತ್ರಿವೇಣಿ ಉಪಸ್ಥಿತರಿದ್ದರು.