ಕೀಟ ಚಿಕ್ಕದು ರೋಗ ದೊಡ್ಡದು

ಐಮಂಗಲ: ಸೊಳ್ಳೆಗಳನ್ನು ನಿಯಂತ್ರಿಸಿದರೆ ಡೆಂೆ ರೋಗವನ್ನು ತಡೆಗಟ್ಟಬಹುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಸೋಮ್ಲಾಪುರ ಹೇಳಿದರು.

ಐಮಂಗಲ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಸ್.ವಿ.ಎಸ್.ಪ್ರೌಢಶಾಲೆ ಸಹಯೋಗದಲ್ಲಿ ಸೋಮವಾರ ಜರುಗಿದ ಡೆಂೆ ವಿರೋಧಿ ಜಾಥಾ ವೇಳೆ ಮಾತನಾಡಿದರು.

ಕೀಟ ಚಿಕ್ಕದು. ಅದು ಹರಡುವ ರೋಗ ದೊಡ್ಡದು. ಡೆಂೆ ಜ್ವರವು ಈಡಿಸ್ ಎಂಬ ಸೊಳ್ಳೆಯಿಂದ ಹರಡಲಿದೆ. ರೋಗಪೀಡಿತ ವ್ಯಕ್ತಿ ವಿಪರೀತ ತಲೆನೋವು, ಚಳಿಜ್ವರದಿಂದ ಬಳಲುತ್ತಾನೆ. ಆತನ ರಕ್ತದ ಮಾದರಿಯನ್ನು ಜಿಲ್ಲಾಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸುವುದು ಹಾಗೂ ರಕ್ತಕಣಗಳ ಪರೀಕ್ಷೆ ಮೂಲಕ ಒಟ್ಟು ಎರಡು ಹಂತದಲ್ಲಿ ರೋಗ ಪತ್ತೆ ಮಾಡಲಾಗುವುದು ಎಂದರು.

ನೀರಿನಲ್ಲಿ ರೋಗ ವಾಹಕ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲಿವೆ. ಮನೆಯ ಒಳ ಹೊರಗೆ ನೀರನ್ನು ಶೇಖರಿಸುವ ತೊಟ್ಟಿ, ಡ್ರಮ್, ಮಡಿಕೆಗಳಲ್ಲಿ ಶೇಖರಿಸಿರುವ ನೀರಿನಲ್ಲಿ ಸೊಳ್ಳೆ ಲಾರ್ವಾಗಳು ಉತ್ಪತ್ತಿಯಾಗಲಿವೆ. ಹಾಗಾಗಿ ಸಂಗ್ರಹಿಸಿದ ನೀರು ಖಾಲಿ ಮಾಡಿ ಆಗಾಗ್ಗೆ ಶುದ್ಧಗೊಳಿಸಬೇಕು. ತೊಟ್ಟಿಗಳ ಒಳಗೆ ಸುಣ್ಣ ಹಚ್ಚಬೇಕು ಎಂದು ಸಲಹೆ ನೀಡಿದರು.

ಅಮಿತ್, ನೇತ್ರಾವತಿ, ಮಂಜುಳಾ, ಮುಖ್ಯ ಶಿಕ್ಷಕ ಬಿ.ಮಂಜುನಾಥ್, ಗೊಂಚಿಗಾರ್, ಶಿವಮೂರ್ತಿ ಹಾಗೂ ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *