ಸ್ವಚ್ಛತೆ ಇದ್ದೆಡೆ ಆರೋಗ್ಯ

ಐಮಂಗಲ: ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡರೆ ಆರೋಗ್ಯಕರ ಜೀವನ ನಡೆಸಬಹುದು ಎಂದು ಯರಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜ್ಯೋತಿ ತಿಳಿಸಿದರು.

ಹೋಬಳಿಯ ಸೊಂಡೆಕೆರೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಬುಧವಾರ ಯರಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಡೆಂೆ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾರಣಾಂತಿಕ ಕಾಯಿಲೆಗಳಿಗೆ ಸೊಳ್ಳೆಗಳೇ ಮೂಲ ಕಾರಣ. ಇವುಗಳ ಉತ್ಪತ್ತಿ ತಡೆದರೆ ರೋಗಮುಕ್ತ ಜೀವನ ನಮ್ಮದಾಗುತ್ತದೆ ಎಂದರು.

ವೀಣಾ, ನಾಗವೇಣಿ, ಲಕ್ಷ್ಮಿ ಹಾಗೂ ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *