ಗೋಶಾಲೆ ಸದುಪಯೋಗಕ್ಕೆ ಸಲಹೆ

ಐಮಂಗಲ: ರೈತರು ಗೋಶಾಲೆಯ ಸದುಪಯೋಗ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ರಾಜಸ್ವನಿರೀಕ್ಷಕ ಎಂ.ಎಂ.ಸದಾಶಿವಪ್ಪ ತಿಳಿಸಿದರು.

ಹೋಬಳಿಯ ಹರ್ತಿಕೋಟೆ ಗ್ರಾಮದಲ್ಲಿ ಶುಕ್ರವಾರ ಗೋಶಾಲೆಗೆ ಚಾಲನೆ ನೀಡಿ, ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲೆಡೆ ಗೋಶಾಲೆ ಆರಂಭಿಸಲು ಆದೇಶಿಸಿದೆ ಎಂದರು.

ಇದರಂತೆ ನೀರು ನೆರಳಿನ ವ್ಯವಸ್ಥೆ ಇರುವ ಹರ್ತಿಕೋಟೆಯಲ್ಲಿ ಗೋಶಾಲೆ ಆರಂಭಿಸಲಾಗಿದೆ. ಮೇವು, ನೀರಿನ ಕೊರತೆ ಇರುವ ಗೋಪಾಲಕರು ತಮ್ಮ ರಾಸುಗಳನ್ನು ಇಲ್ಲಿಗೆ ತಂದು ಬಿಡಬಹುದು. ಇವುಗಳಿಗೆ ಅಗತ್ಯವಿರುವ ಮೇವನ್ನು ಜಿಲ್ಲಾಡಳಿತ ಪೂರೈಕೆ ಮಾಡುತ್ತದೆ ಎಂದು ತಿಳಿಸಿದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಹೊರಕೇರಪ್ಪ, ಯರಬಳ್ಳಿ ಪಶು ಇಲಾಖೆಯ ಡಾ.ವಾಸಂತಿ, ಪಿಡಿಒ ಆಫೀನ್ ತಿಯಾಸ್ ಬೇಗಂ ಮತ್ತಿತರರಿದ್ದರು.

Leave a Reply

Your email address will not be published. Required fields are marked *