ಸಾಕ್ಷರತೆಯಲ್ಲಿ ಪರಿಪೂರ್ಣ ಗುರಿ ಸಾಧಿಸಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಕರೆ ಸಾಕ್ಷರ ಪಂಚಾಯಿತಿಗಳ ನಿರ್ಮಾಣ ಇಂದಿನ ಅಗತ್ಯ


ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಕರೆ ಸಾಕ್ಷರ ಪಂಚಾಯಿತಿಗಳ ನಿರ್ಮಾಣ ಇಂದಿನ ಅಗತ್ಯ
ಚಿಕ್ಕಬಳ್ಳಾಪುರ: ಜಾಗೃತಿ ಮತ್ತು ಅನುಷ್ಠಾನ ಚಟುವಟಿಕೆ ದ್ವಿಗುಣಗೊಳಿಸಿ, ಸಾಕ್ಷರತೆಯಲ್ಲಿ ಪರಿಪೂರ್ಣ ಗುರಿ ಸಾಧಿಸಲು ಶ್ರಮಿಸಬೇಕಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕರೆ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಲೋಕಶಿಕ್ಷಣ ಸಮಿತಿ, ಡಿಎಸ್‌ಇಆರ್‌ಟಿ ಲೋಕಶಿಕ್ಷಣ ವಿಭಾಗಗಳ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ವ್ಯವಹಾರದ ಶಿಸ್ತು, ಮಹಿಳಾ ಸಬಲೀಕರಣಕ್ಕೆ ಸಾಕ್ಷರತೆಯಲ್ಲಿ ಪರಿಪೂರ್ಣ ಸಾಧನೆ ಮಾಡುವುದು ಅಗತ್ಯವಿದೆ. ಆರೋಗ್ಯ, ಲಿಂಗ ಸಮಾನತೆ, ಶಾಂತಿ, ಸುಸ್ಥಿರ ಅಭಿವೃದ್ಧಿಗಾಗಿ ಲಿಂಗ ಭೇದವಿಲ್ಲದೇ ಪ್ರತಿಯೊಂದು ವರ್ಗವೂ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು.ಎಲ್ಲಕ್ಕಿಂತ ಮುಖ್ಯವಾಗಿ ಪುರುಷ ಮತ್ತು ಮಹಿಳಾ ಸಾಕ್ಷರತೆಯ ಪ್ರಮಾಣದ ನಡುವಿನ ಅಂತರವನ್ನು ಕಡಿಮೆಗೊಳಿಸಬೇಕಿದೆ. ಪಂಚಾಯಿತಿ ಪ್ರತಿನಿಧಿಗಳು ಸಾಕ್ಷರರಾಗಬೇಕಲ್ಲದೇ ಹಿಂದುಳಿದ ತಾಲೂಕುಗಳಲ್ಲಿ ಆಯ್ದ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರ ಪಂಚಾಯಿತಿಗಳನ್ನಾಗಿಸಬೇಕಾಗಿದೆ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಮುನಿಕೆಂಪೇಗೌಡ ಮಾತನಾಡಿ, 15 ವರ್ಷ ಮತ್ತು ಮೇಲ್ಪಟ್ಟ ಎಲ್ಲರಿಗೂ ವಿಮರ್ಶಾತ್ಮಕ ಜೀವನಕೌಶಲಗಳ ತರಬೇತಿ ನೀಡುವುದು, ಆರ್ಥಿಕ ಮತ್ತು ಕಾನೂನಿನ ಸಾಕ್ಷರತೆ ಡಿಜಿಟಲ್ ಸಾಕ್ಷರತೆ, ವಿಪತ್ತು ನಿರ್ವಹಣೆ, ವಾಣಿಜ್ಯ ಮತ್ತು ಆರೋಗ್ಯ ಸುರಕ್ಷತೆ, ಶಿಕ್ಷಣ ಮತ್ತು ಕುಟುಂಬ ಕಲ್ಯಾಣಗಳಿಗಾಗಿ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು. ಕಲಿಕಾ ತಂತ್ರಜ್ಞಾನ ಶೈಲಿ ಸರಳವಾಗಿದೆ. ನವಸಾಕ್ಷರರಿಗೆ ಜೀವನಪರ್ಯಂತ ಕಲಿಕೆ ಮತ್ತು ಬಳಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ವಯಸ್ಕರ ಸಾಕ್ಷರತೆಯ ಪ್ರಮಾಣ ಕಡಿಮೆ ಇದ್ದು, ಶಾಲೆ, ಗ್ರಂಥಾಲಯ, ಸಮುದಾಯ ಕೇಂದ್ರಗಳು, ಸ್ತ್ರೀಶಕ್ತಿ ಗುಂಪುಗಳ ಮೂಲಕ ಸಾಕ್ಷರತೆ ಸಾಧಿಸಬಹುದಾಗಿದೆ. ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಕಾಯ್ದುಕೊಳ್ಳುವ ಪ್ರಯತ್ನಗಳಾಗುತ್ತಿವೆ. ಕರ್ನಾಟಕದಲ್ಲಿ ಹಿಂದಿನಿಂದಲೂ ನಡೆದ ಸಾಕ್ಷರತಾ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದರು.ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ, ಅಧಿಕಾರಿಗಳಾದ ರಾಮಾನುಜಂ, ಲಕ್ಷ್ಮೀನಾರಾಯಣ್, ಶಿವಪ್ಪ, ಸುರೇಶ್, ಕಾರ್ಯಕ್ರಮ ಸಹಾಯಕ ಎಂ.ಮನು ಮತ್ತಿತರರು ಇದ್ದರು.

ಪ್ರಮಾಣ ಪತ್ರ ವಿತರಣೆ
ನವಸಾಕ್ಷರರಿಗೆ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಡಿಸಿ ಪಿ.ಎನ್. ರವೀಂದ್ರ ವಿತರಿಸಿದರು. ಸಾಕ್ಷರತಾ ಕಾರ್ಯಕ್ರಮಗಳ ಕುರಿತಾದ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಾಕ್ಷರತಾ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…