ಐಎಂಎ ಧೋಖಾ ತನಿಖೆಗೆ ರಚನೆಯಾಯ್ತು ಎಸ್​ಐಟಿ: ಡಿಐಜಿ ರವಿಕಾಂತೇಗೌಡ ನೇತೃತ್ವ

ಬೆಂಗಳೂರು: ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಬೇಧಿಸಲು ಎಸ್​ಐಟಿ ರಚಿಸಲಾಗಿದೆ. ಡಿಐಜಿ ರವಿಕಾಂತೇಗೌಡ ನೇತೃತ್ವದಲ್ಲಿ ಒಟ್ಟು 11 ಜನ ಅಧಿಕಾರಿಗಳ ತಂಡವನ್ನು ಸರ್ಕಾರ ರಚನೆ ಮಾಡಿದೆ.

ಬೆಂಗಳೂರು ನಗರ ಕ್ರೈಂ ಬ್ರಾಂಚ್​ನ ಡಿಸಿಪಿ ಎಸ್​. ಗಿರೀಶ್​, ಸಿಸಿಬಿ ಎಸಿಪಿ ಬಾಲರಾಜು, ಬೆಂಗಳೂರು ಸಿಐಡಿ ಡಿವೈಎಸ್​ಪಿ ಕೆ.ರವಿಶಂಕರ್​, ರಾಜ್ಯ ಗುಪ್ತಚರದಳದ ಡಿವೈಎಸ್​ಪಿ ರಾಜಾ ಇಮಾಮ್​ ಖಾಸೀಂ, ಕರ್ನಾಟಕ ಲೋಕಾಯುಕ್ತ ಎಸ್​ಐಟಿ ಡಿವೈಎಸ್​ಪಿ ಅಬ್ದುಲ್​ ಖಾದೀರ್​, ಲೋಕಾಯುಕ್ತ ಪೊಲೀಸ್​ ಅಧಿಕಾರಿ ಸಿ.ಆರ್​. ಗೀತಾ, ಬಿಡಿಎ ಪೊಲೀಸ್​ ಅಧಿಕಾರಿ ಎಲ್​.ವೈ. ರಾಜೇಶ್​, ಸಿಸಿಬಿ ಇನ್ಸ್​ಪೆಕ್ಟರ್​ ಅಂಜನ್​ ಕುಮಾರ್​, ಎಸ್​ಸಿಆರ್​ಬಿ ಇನ್ಸ್​ಪೆಕ್ಟರ್​ ಎನ್​. ತನ್ವೀರ್​ ಅಹ್ಮದ್​, ಕಮರ್ಷಿಯಲ್​ ಸ್ಟ್ರೀಟ್​ ಠಾಣಾಧಿಕಾರಿ ಬಿ.ಕೆ.ಶೇಖರ್​ ಅವರು ಈ ವಿಶೇಷ ತನಿಖಾ ದಳದಲ್ಲಿ ಇದ್ದಾರೆ.

ಪ್ರಕರಣವನ್ನು ಸಿಬಿಐ, ಎನ್​ಐಎಯಂಥ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಹಲವು ದೂರುದಾರರು, ಗಣ್ಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *