ಕೊಪ್ಪಳ: ಏಡ್ಸ್ ಕುರಿತ ಜಾಗೃತಿ ಅಂಗವಾಗಿ ಆರೋಗ್ಯ ಇಲಾಖೆಯಿಂದ ಶುಕ್ರವಾರ ನಗರದಲ್ಲಿ ಮ್ಯಾರಥಾನ್ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಶಿಧರ ಎ. ಮಾತನಾಡಿ, ಯುವಜನರಲ್ಲಿ ಏಡ್ಸ್ ಕುರಿತ ಅರಿವು ಮೂಡಿಸಲು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಕಾಯಿಲೆ ತಡೆಗಟ್ಟಲು ಎಲ್ಲರೂ ಜಾಗೃತರಾಗಬೇಕಿದೆ. ಸುರಾ ಕ್ರಮಗಳನ್ನು ಅನುಸರಿಸುವ ಮೂಲಕ ತಡೆಗಟ್ಟಬಹದು. ಎಲ್ಲರೂ ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ವಿವಿಧ ಕಾಲೇಜುಗಳು, ಕ್ರೀಡಾ ಇಲಾಖೆ ಸಹಯೋಗದಲ್ಲಿ 5 ಕಿ.ಮೀ. ಮ್ಯಾರಥಾನ್ ನಡೆಸಲಾಯಿತು. ಡಾ.ಪ್ರಕಾಶ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್ ಇತರರು ಚಾಲನೆ ನೀಡಿದರು. 126 ಪುರುಷ, 33 ಮಹಿಳಾ ಒಟ್ಟು 159 ಸ್ಪರ್ಧಿಗಳು ಭಾಗವಹಿಸಿದರು.
ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಲಾ ಏಳು ಜನ ವಿಜೇತರಿಗೆ ನಗದು ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಸಿಪಿಐ ಸುರೇಶ, ಪಿಎಸ್ಐ ಮಹಾಂತೇಶ ತಳವಾರ, ಪ್ರಮುಖರಾದ ಶರಣಬಸವ ಬಂಡಿಹಾಳ, ಎ.ಬಸವರಾಜ, ವಿ.ಬಿ.ಗೌಡರ್, ವಿರೂಪಾಕ್ಷಪ್ಪ ಬಾಗೋಡಿ, ಬಸವರಾಜ ಹನುಮಸಾಗರ ಇತರರಿದ್ದರು.