ದೆಹಲಿಯ ಆರು ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹೆಸರು ಪ್ರಕಟ: ಈಶಾನ್ಯ ದೆಹಲಿಯಿಂದ ಶೀಲಾ ಸ್ಪರ್ಧೆ

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್​ ಸಮಿತಿ (ಎಐಸಿಸಿ) ರಾಷ್ಟ್ರ ರಾಜಧಾನಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್​ ಈಶಾನ್ಯ ದೆಹಲಿ ಲೋಕಸಭೆ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಪೂರ್ವ ದೆಹಲಿಯಿಂದ ಅರ್ವಿಂದರ್​ ಸಿಂಗ್​ ಲವ್​ಲಿ ಸ್ಪರ್ಧಿಸಲಿದ್ದರೆ, ದೆಹಲಿ ಲೋಕಸಭಾ ಕ್ಷೇತ್ರದಿಂದ ಅಜಯ್​ ಮಾಕೆನ್​ ಕಣಕ್ಕಿಳಿಯಲಿದ್ದಾರೆ.

ಚಾಂದಿನಿ ಚೌಕ್​ ಕ್ಷೇತ್ರದಿಂದ ಜೆ.ಪಿ ಅಗರ್​ವಾಲ್​, ವಾಯವ್ಯ ದೆಹಲಿ (ಎಸ್​ಸಿ) ಕ್ಷೇತ್ರದಿಂದ ರಾಜೇಶ್​ ಲಿಲೋಥಿಯಾ ಮತ್ತು ಪಶ್ಚಿಮ ದೆಹಲಿಯಿಂದ ಮಹಾಬಲ್​ ಮಿಶ್ರಾ ಸ್ಪರ್ಧಿಸಲಿದ್ದಾರೆ. (ಏಜೆನ್ಸೀಸ್​)