ಸಿದ್ಧಗಂಗಾ ಆಸ್ಪತ್ರೆಯಲ್ಲಿ ಎಐ ಎಂಆರ್​ಐ

blank

ಕೃತಕ ಬುದ್ಧಿಮತ್ತೆ ಕಾರ್ಯನಿರ್ವಹಣೆ, ಕಡಿಮೆ ಸಮಯದಲ್ಲಿ ನಿಖರ ಫಲಿತಾಂಶ

ತುಮಕೂರು:ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಕಳೆದ ಏಳು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸಿದ್ಧಗಂಗಾ ಆಸ್ಪತ್ರೆ ಈಗ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಕಾರ್ಯನಿರ್ವಹಿಸುವ ಯುನೈಟೆಡ್​ ಇಮೇಜಿಂಗ್​ ಸಂಸ್ಥೆಯ ಉತ್ಪನ್ನ ಎಂಆರ್​ಐ ಟಕ ಆರಂಭಿಸುವ ಮೂಲಕ ಚಿಕಿತ್ಸಾ ವಿಭಾಗದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.


ರೋಗಿಗಳಿಗೆ ಕಡಿಮೆ ಸಮಯದಲ್ಲಿ ಪರೀೆ ಮಾಡುವ ಹಾಗೂ ತ್ವರಿತಗತಿಯಲ್ಲಿ ನಿಖರ ಫಲಿತಾಂಶ ನೀಡುವ ಎಂಆರ್​ಐ ಟಕ ಇದಾಗಿದ್ದು, ತುಮಕೂರು ಜಿಲ್ಲೆಯಲ್ಲಿಯೇ ಎಐ ಸೌಲಭ್ಯ ಹೊಂದಿರುವ ಏಕೈಕ ಎಂಆರ್​ಐ ಟಕದ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ತುಮಕೂರಿನ ಸಿದ್ಧಗಂಗಾ ವೈದ್ಯಕಿಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಗುರುವಾರ ನೂತನ ಟಕಕ್ಕೆ ಸಿದ್ಧಗಂಗಾ ಮಠಾಧ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಉನ್ನತ ದರ್ಜೆಯ ಸೇವೆ ನೀಡುವಲ್ಲಿ ಎಂದೂ ರಾಜಿಯಾಗದ ನಮ್ಮ ಆಸ್ಪತ್ರೆ ಈಗ ಎಂಆರ್​ಐ ಸೇವೆ ಆರಂಭಿಸಿದ್ದು, ತುರ್ತು ಸಂದರ್ಭಗಳಲ್ಲಿ ವೈದ್ಯಕಿಯ ತೀರ್ಮಾನಗಳಿಗೆ ನೆರವಾಗಲಿದೆ. ಒಂದೇ ಸೂರಿನಡಿ ಎಲ್ಲ ಸೌಕರ್ಯಗಳನ್ನು ಒದಗಿಸುವ ಮೂಲಕ ಜನರಿಗೆ ಮತ್ತಷ್ಟು ಆರೋಗ್ಯದ ಭರವಸೆ ನೀಡಲು ಟಕ
ಪ್ರೇರಣೆಯಾಗಿದೆ ಎಂದರು.


ಕಾರ್ಯಕಾರಿ ನಿರ್ದೇಶಕ ಡಾ.ಎಸ್​.ಸಚ್ಚಿದಾನಂದ ಮಾತನಾಡಿ, ಯಾವುದೇ ಆಸ್ಪತ್ರೆ ತಂತ್ರಾನ ಅಳವಡಿಸಿಕೊಂಡರೆ ಆ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಆರೋಗ್ಯದಲ್ಲಿ ಗಮನಾರ್ಹ ಬೆಳವಣಿಗೆ ಕಾಣುತ್ತದೆ. ಇದೀಗ ಎಂಆರ್​ಐ ತಂತ್ರಾನ ಅಳವಡಿಸಿಕೊಳ್ಳುವ ಮೂಲಕ ರೋಗಿಗಳ ಚಿಕಿತ್ಸೆ ನೀಡುವ ವಿಷಯದಲ್ಲಿ ನಮ್ಮ ಬದ್ಧತೆ ಹೆಚ್ಚಿಸಿಕೊಂಡಿದ್ದೇವೆ ಎಂದರು.


ನಿರ್ದೇಶಕ ಡಾ.ಎಸ್​.ಪರಮೇಶ್​ ಮಾತನಾಡಿ, ಜನರಿಗೆ ದಿನದ 24 ಗಂಟೆಯೂ ತುರ್ತು ಸೇವೆ ನೀಡುವ ಸಿದ್ಧಗಂಗಾ ಆಸ್ಪತ್ರೆ ಈಗಾಗಲೇ ಎಲ್ಲ ರೀತಿಯ ಅತ್ಯಾಧುನಿಕ ಸೌಕರ್ಯ ಒಳಗೊಂಡಿದೆ. ಈಗ ಎಂಆರ್​ಐ ಸೇವೆ ಆರಂಭಿಸಿರುವುದು ಆಸ್ಪತ್ರೆಯ ವೈದ್ಯಕಿಯ ಸೌಕರ್ಯಗಳಲ್ಲಿ ಪರಿಪೂರ್ಣತೆ ಸಾಧಿಸುವಂತೆ ಮಾಡಿದೆ. ಎಲ್ಲ ವರ್ಗದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಎಂಆರ್​ಐ ಪರೀೆ ದೊರೆಯಲಿದ್ದು, ಇಂದಿನಿಂದಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ ಎಂದರು.


ಸಿದ್ಧಗಂಗಾ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಾಲಿನಿ ಮಾತನಾಡಿ, ಯಾವುದೇ ದೈಹಿಕ ಸಮಸ್ಯೆಗಳ ಕುರಿತು ಸ್ಪಷ್ಟತೆ ಪಡೆಯಲು ಹಾಗೂ ಕೂಲಂಕಷ ಅಧ್ಯಯನ ಮಾಡಲು ಎಂಆರ್​ಐ ತಂತ್ರಾನ ಹೆಚ್ಚು ಅನುಕೂಲಕರ. ಇದು ವೈದ್ಯರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುವ ಜತೆಗೆ ವೈದ್ಯಕಿಯ ವಿದ್ಯಾರ್ಥಿಗಳ ಅಧ್ಯಯನಕ್ಕೂ ನೆರವಾಗಲಿದೆ ಎಂದರು.
ವೈದ್ಯಕಿಯ ಅಧೀಕ ಡಾ.ನಿರಂಜನಮೂರ್ತಿ, ಸಿಇಒ ಡಾ.ಸಂಜೀವಕುಮಾರ್​, ನರ್ಸಿಂಗ್​ ವಿಭಾಗದ ಮುಖ್ಯಸ್ಥ ನಾಗಣ್ಣ, ರೇಡಿಯಾಲಜಿಸ್ಟ್​ ಗಳಾದ ಡಾ.ದೃವ, ಡಾ.ಪ್ರಸಾದ್​, ಡಾ.ತಿಲಕ್​, ಡಾ.ಸಮೀಹ ಮತ್ತಿತರರು ಇದ್ದರು.

Share This Article

Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ನಾಲ್ಕು ವಸ್ತುಗಳನ್ನು ಇಟ್ಟರೆ ಯಶಸ್ಸು ನಿಮ್ಮದೇ….!

Vastu Tips :  ಮನೆಯ ಮುಖ್ಯ ಬಾಗಿಲನ್ನು ಸಂತೋಷದ ಬಾಗಿಲು ಎಂದು ಪರಿಗಣಿಸಲಾಗುತ್ತದೆ. ಇಲ್ಲಿಂದ ಎಲ್ಲರಿಗೂ…

ನಿಮ್ಮ ಕನಸಿನಲ್ಲಿ ಬೆಕ್ಕನ್ನು ನೀವು ಪದೇ ಪದೇ ನೋಡುತ್ತೀರಾ? ಇದು ಶುಭನಾ? ಅಶುಭನಾ?.. Dream Science

Dream Science : ನಿದ್ದೆ ಮಾಡುವಾಗ ನಮಗೆ ಹಲವಾರು ರೀತಿಯ ಕನಸುಗಳಿರುತ್ತವೆ. ಅವುಗಳಲ್ಲಿ ಕೆಲವು ಒಳ್ಳೆಯ…

ನಾವು ಬಳಸಿದ ಬಟ್ಟೆಯನ್ನು ಇತರರಿಗೆ ದಾನ ಮಾಡಿದರೆ ಏನಾಗುತ್ತದೆ ಗೊತ್ತಾ? Clothes Donate

Clothes Donate: ನಾವು ಬಳಸಿದ ಬಟ್ಟೆಗಳನ್ನು ಇತರರಿಗೆ ನೀಡುವುದು ಒಳ್ಳೆಯದು ಆದರೆ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು…