ಬೆಂಗಳೂರು: ಎಜುನೆಟ್ ಫೌಂಡೇಷನ್ ಹಾಗೂ ಮೈಕ್ರೋ ಸಾಫ್ಟ್ ಸಹಯೋಗದಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆಯ ತರಬೇತಿ ಪ್ರಧಾನ ನಿರ್ದೇಶನಾಲಯವು ಒಂದು ವರ್ಷ ಅವಧಿಯ ‘ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ವೃತ್ತಿಪರ ಕೋರ್ಸ್’ ತರಬೇತಿ ಆರಂಭಿಸಿದೆ. 2026ರ ವೇಳೆಗೆ ಒಂದು ದಶಲಕ್ಷ ಎಐ ವೃತ್ತಿಪರರನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಯೋಜನೆ ರೂಪಿಸಲಾಗಿದೆ. 4.0 ಮತ್ತು ಭವಿಷ್ಯ ಆಧಾರಿತ ಉದ್ಯಮಗಳು ಎಐನಲ್ಲಿ ವೃತ್ತಿಜೀವನ ಮುಂದುವರಿಸುವ ಸಾಮರ್ಥ್ಯವಿರುವ ಉದ್ಯೋಗಿಗಳನ್ನು ಬೆಳೆಸುವುದು ಮತ್ತು ವೃತ್ತಿಪರ ಶಿಕ್ಷಣದಿಂದ ಎಐ ಕೇಂದ್ರಿತ ವೃತ್ತಿಗಳಿಗೆ ಪರಿವರ್ತನೆ ಯಾಗುವ ವಿದ್ಯಾರ್ಥಿಗಳಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುವುದು ಕೋರ್ಸ್ನ ಗುರಿಯಾಗಿದೆ.
ಇದನ್ನೂ ಓದಿ: ವಯನಾಡ್‌ನ ಭೂಕುಸಿತ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ
ಬೆಂಗಳೂರು, ಮುಂಬೈ, ಕಾನ್ಪುರ, ನೋಯ್ಡಾ, ಕೋಲ್ಕತ್ತ ಸೇರಿ ದೇಶದ ವಿವಿಧ ಮಹಾನಗರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ದೇಶಾದ್ಯಂತ ಕೇವಲ 450 ಸೀಟು ಮಾತ್ರ ಲಭ್ಯವಾಗಲಿವೆ. 10ನೇ ತರಗತಿ ಉತ್ತೀರ್ಣರಾಗಿರ ಬೇಕು. ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. 12 ತಿಂಗಳ ಕಾಲ ತರಗತಿಗಳು ಇರಲಿವೆ. ಎಐನಲ್ಲಿ ವೃತ್ತಿ ಜೀವನ ಆರಂಭಿಸಲು ಮತ್ತು ಉದ್ಯೋಗಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಲು ಸಿದ್ಧರಿರಬೇಕು. ಸರ್ಕಾರದ ಮೀಸಲಾತಿ ಅನ್ವಯ ಪ್ರವೇಶ ಕಲ್ಪಿಸಲಾಗುತ್ತದೆ.
ಕೋರ್ಸ್ ಮಾಡ್ಯೂಲ್ಗಳು: ಕಂಪ್ಯೂಟರ್ ಬೇಸಿಕ್ ಆಂಡ್ ಆಪರೇಟಿಂಗ್ ಸಿಸ್ಟಂ ಕಾನ್ಪಿಗಿರೇಷನ್, ಲಾಂಗ್ವೇಜ್ ಪ್ರೊಸೆ ಸಿಂಗ್ ಅಪ್ಲಿಕೇಷನ್, ಪೈಥಾನ್ ಪ್ರೋಗ್ರಾಮಿಂಗ್ ಆಂಡ್ ಡೇಟಾಬೇಸ್ ಫಂಡಮೆಂಟಲ್ಸ್, ಡೇಟಾ ಸೈನ್ಸ್, ಎಐ ಆಂಡ್ ಮಷಿನ್ ಲರ್ನಿಂಗ್, ಎಐ ಇನ್ ಆಕ್ಷನ್: ರಿಯಲ್ ವರ್ಲ್ಡ್ ಯೂಸ್ ಕೇಸಸ್, ಅಪ್ಲೈಡ್ ಎಐ: ಇಂಟಿಗ್ರೇಷನ್ ಆಂಡ್ ಎಥಿಕ್ಸ್ ಸೇರಿ ವಿವಿಧ ಮಾಡ್ಯೂಲ್ ತಿಳಿಸಿಕೊಡಲಾಗುತ್ತದೆ.
ಕೋರ್ಸ್ನ ಉಪಯೋಗಗಳೇನು?: ಎಐ ತಂತ್ರಜ್ಞಾನದಲ್ಲಿ ಸಾಮರ್ಥ್ಯ ಹೆಚ್ಚಳವಾಗಲಿದೆ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಕೌಶಲ ತಿಳಿಸಿಕೊಡಲಾಗುತ್ತದೆ. ಕೋರ್ಸ್ ಮುಗಿದಬಳಿಕ ಪ್ರಮಾಣಪತ್ರ ವಿತರಣೆ ಮಾಡಲಾಗುತ್ತದೆ. ನಂತರ ಉದ್ಯೋಗ ಕಲ್ಪಿಸಲು ಪ್ಲೇಸ್ವೆುಂಟ್ಗೆ ಬೆಂಬಲ ನೀಡಲಾಗುತ್ತದೆ.
30ರೊಳಗೆ ಅಂತಿಮ ಪಟ್ಟಿ
ಆಸಕ್ತರು ಅರ್ಜಿ ಸಲ್ಲಿಸಲು ಭಾನುವಾರ (ಆ.11) ಕೊನೇ ದಿನ. ಆಯ್ಕೆಯಾದ ಅಭ್ಯರ್ಥಿಗಳಿಗೆ 12ರಿಂದ 20ರ ಅವಧಿಯಲ್ಲಿ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ. 16 ರಿಂದ 30ರೊಳಗೆ ದಾಖಲಾತಿ ಪರಿಶೀಲಿಸಿ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಸೆ.2ಕ್ಕೆ ತರಗತಿಗಳು ಆರಂಭವಾಗಲಿವೆ. ಸಾಮಾನ್ಯ ವರ್ಗಕ್ಕೆ 500 ರೂ. ಮತ್ತು ಪರಿಶಿಷ್ಟ ಜಾತಿ/ ಪಂಗಡಕ್ಕೆ 275 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಾಹಿತಿಗೆ ದೂ.: 99002 30579, 88848 70742.
ಪಾಕ್ಗೆ ಸಲಹೆ ಕೊಡುವ ಮೊದಲು ನಿಮ್ಮ ಪ್ರದರ್ಶನ ಹೇಗಿದೆ ನೋಡ್ಕೊಳ್ಳಿ: ರೋಹಿತ್ ಪಡೆ ವಿರುದ್ಧ ತನ್ವಿರ್ ಕಿಡಿ
ವಿವಾದದ ನಡುವೆಯೇ ಚಿನ್ನ ಗೆದ್ದ ಇಮಾನೆ ಖೇಲಿಫ್! ಇದೇ ‘ಯಶಸ್ಸಿನ ವಿಶೇಷ ಅಭಿರುಚಿ’ ಎಂದ ಚಾಂಪಿಯನ್