More

  ನಾಯಿ ಕಚ್ಚಿದ್ದಕ್ಕೆ ಮಾಲೀಕನಿಗೆ ಜೈಲು

  ಅಹಮದಾಬಾದ್: ಸಾಕು ನಾಯಿಯೊಂದು ನೆರೆಮನೆಯ ನಾಲ್ವರಿಗೆ ಕಚ್ಚಿ ಗಾಯಗೊಳಿಸಿದ್ದಕ್ಕಾಗಿ ಆ ನಾಯಿಯ ಮಾಲೀಕನಿಗೆ ಜೈಲು ಶಿಕ್ಷೆ ವಿಧಿಸಿದ ಅಪರೂಪದ ಘಟನೆ ವರದಿಯಾಗಿದೆ.

  ಗುಜರಾತ್​ನ ಘೋದಸಾರ್ ನಿವಾಸಿ ಭಾರೇಶ್ ಪಾಂಡ್ಯಾ (49) ತಮ್ಮ ನಾಯಿ ಮಾಡಿದ ತಪ್ಪಿಗೆ ಒಂದು ವರ್ಷ ಸೆರೆವಾಸ ಅನುಭವಿಸುವಂತಾಗಿದೆ. ಶಕ್ತಿ ಎಂಬ ಹೆಸರಿನ ಡಾಬರ್​ವ್ಯಾನ್ ಶ್ವಾನ, 2012ರಿಂದ 2014ರ ನಡುವೆ ನೆರೆಹೊರೆಯ ಒಟ್ಟು ನಾಲ್ಕು ಜನರನ್ನು ಕಚ್ಚಿ ಗಾಯಗೊಳಿಸಿತ್ತು. ಮೂರು ಮಕ್ಕಳು ಹಾಗೂ ಅವಿನಾಶ್ ಪಟೇಲ್ ಎಂಬ ವಯಸ್ಕನೊಬ್ಬ ಶ್ವಾನ ಕಾಟದಿಂದ ಗಾಯಗೊಂಡಿದ್ದರು. ಅವಿನಾಶ್ ಕೇಸ್ ದಾಖಲಿಸಿದ್ದ. ಈ ಪ್ರಕರಣದಲ್ಲಿ ಪಾಂಡ್ಯಾ ನೇರವಾಗಿ ಭಾಗಿಯಾಗದಿದ್ದರೂ ಆತನ ನಿರ್ಲಕ್ಷದಿಂದಾಗಿ ನಾಯಿ ಇತರರನ್ನು ಕಚ್ಚಿ ಗಾಯಗೊಳಿಸಿದೆ ಎಂಬುದು ಕೋರ್ಟ್ ಅಭಿಪ್ರಾಯ.

  ಗಂಭೀರ ಗಾಯ ಹಾಗೂ ಇತರರ ಪ್ರಾಣವನ್ನು ಅಪಾಯಕ್ಕೆ ತಳ್ಳಿದ್ದಕ್ಕಾಗಿ ಪಾಂಡ್ಯಾಗೆ ಐಪಿಸಿ ಸೆಕ್ಷನ್ 338ರನ್ವಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಸರ್ಕಾರ ವಾದಿಸಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts