ಕಾರಿಗೆ ಸಗಣಿ ಬಳಿದು ಅದರ ಬಳಕೆ ಹೀಗೂ ಮಾಡಬಹುದು ಎಂದು ತೋರಿಸಿದ ಕಾರು ಚಾ’ಲಾ’ಕಿ

ಅಹಮದಾಬಾದ್​: ದೇಶದಾದ್ಯಂತ ಬಿಸಿಲ ಬೇಗೆ ತೀವ್ರವಾಗಿ ಹೆಚ್ಚಳವಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಜನತೆ ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ತಾಪಮಾನ ಹೆಚ್ಚಳವಾಗಿ ಸಾವು ನೋವು ಸಂಭವಿಸಿರುವುದೂ ಉಂಟು. ಇಲ್ಲೊಬ್ಬರು ಬಿಸಿಲ ಬಿಸಿಯಿಂದ ತಪ್ಪಿಸಿಕೊಳ್ಳಲು ಹೊಸ ಪ್ರಯತ್ನ ಮಾಡಿದ್ದಾರೆ.

ಅಹಮದಾಬಾದ್​ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯನ್ನು ಹಚ್ಚಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿನ ಮಹಿಳೆಯೊಬ್ಬರು ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ರೂಪೇಶ್​ ಗುರಂಗದಾಸ್​ ಎಂಬುವವರು ಈ ಕಾರಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು “ನಾನು ನೋಡಿದ ಸಗಣಿಯ ಉತ್ತಮ ಬಳಕೆ’ ಎಂದು ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್​ ಮಾಡಿರುವ ಅವರು, ಕಾರನ್ನು ತಂಪಾಗಿಸಲು ಕಂಡುಕೊಂಡಿರುವ ಉತ್ತಮ ಪ್ರಯತ್ನ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆ ಕಾರಿನ ಮಾಲಿಕಳಾಗಿದ್ದು, ಆಕೆಯ ಚಾಲಾಕಿತನವನ್ನು ಹೊಗಳಿ ಪ್ರಶಂಸೆಯ ಸುರಿಮಳೆಯಮನ್ನೇ ಹರಿಸಿದ್ದಾರೆ.

ಭಾರತದಲ್ಲಿ ಸಗಣಿಯನ್ನು ಮನೆಯ ಗೋಡೆ, ಮಹಡಿಗಳಿಗೆ ಹಚ್ಚುವುದು ಸಾಮಾನ್ಯ. ಸಗಣಿಯ ಬೆರಣಿಯನ್ನು ಉರುವಲಾಗಿ ಹಾಗೂ ಔಷಧವಾಗಿ ಬಳಸಲಾಗುತ್ತಿದೆ. ಇದು ಬೇಸಿಗೆಯಲ್ಲಿ ತಂಪಾಗಿರಲು ಹಾಗೂ ಮಳೆಗಾಲದಲ್ಲಿ ಬೆಚ್ಚನೆಯ ಅನುಭವ ಪಡೆಯಲು ಸಹಾಯಮಾಡುತ್ತದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *