ಎಫ್​​ಎಟಿಎಫ್ ಎಚ್ಚರಿಕೆಗೆ ತಲೆಬಾಗಿದ ಪಾಕ್​: ನಾಲ್ವರು ಜೆಇಡಿ, ಎಲ್​ಇಟಿ ಉಗ್ರ ನಾಯಕರ ಬಂಧನ

ಇಸ್ಲಮಾಬಾದ್​: ಉಗ್ರವಾದಕ್ಕೆ ಆರ್ಥಿಕ ನೆರವು ನೀಡಿದ ಆರೋಪದಡಿ ನಿಷೇಧಿತ ಸಂಘಟನೆಗಳ ನಾಲ್ವರು ನಾಯಕರನ್ನು ಪಾಕಿಸ್ತಾನದ ಲಾ ಎನ್​ಪೋರ್ಸ್​​ಮೆಂಟ್​ ಏಜೆನ್ಸಿಗಳು ಗುರುವಾರ ಬಂಧಿಸಿವೆ.

ನಿಷೇಧಿತ ಎಲ್​ಇಟಿ ಅಥವಾ ಜೆಯುಡಿ ಸಂಘಟನೆಗೆ ಹಣಕಾಸಿನ ನೆರವು ನೀಡಿದ ಪ್ರೊ. ಜಾಫರ್​ ಇಬ್ಕಾಲ್​, ಯಹ್ಯಾ ಅಜೀಜ್​, ಮೊಹಮ್ಮದ್​ ಅಶ್ರಫ್​​ ಹಾಗೂ ಅಬ್ದುಲ್ ಸಲಾಂ ಎಂಬುವರನ್ನು ಬಂಧಿಸಲಾಗಿದೆ.
ಪ್ಯಾರೀಸ್​ನಲ್ಲಿ ಅಕ್ಟೋಬರ್​ 12-15ರವೆರೆಗೆ ಫಿನಾನ್ಶಿಯಲ್ ಆಕ್ಷನ್ ಟಾಸ್ಕ್​ ಫೋರ್ಸ್​ (ಎಫ್​​ಎಟಿಎಫ್​)ನ ಸಭೆ ನಡೆಯುತ್ತಿರುವ ಹಿನ್ನೆಲೆ ಇಂತಹದೊಂದು ಕ್ರಮಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನಲಾಗುತ್ತಿದೆ.

ಉಗ್ರವಾದವನ್ನು ಹತ್ತಿಕ್ಕುವ ಸಂಬಂಧ ಟಾಸ್ಕ್​ಫೋರ್ಸ್​ ವಿಧಿಸಿದ್ದ ನಿಮಯಗಳನ್ನು ಪಾಲಿಸದೆ ಪಾಕಿಸ್ತಾನ ಗ್ರೇ ಪಟ್ಟಿ ಸೇರಿತ್ತು. 2019ರ ಅಕ್ಟೋಬರ್​ ಒಳಗೆ ಪಾಕ್ ಎಚ್ಚೆತ್ತುಕೊಳ್ಳದಿದ್ದರೆ ಕಪ್ಪುಪಟ್ಟಿಗೆ ಸೇರಿಸುವುದಾಗಿ ಸಹ ಎಚ್ಚರಿಸಲಾಗಿತ್ತು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಪಾಕ್ ಕೆಲವು ಉಗ್ರ ನಾಯಕರನ್ನು ಬಂಧಿಸಿದೆ ಎನ್ನಲಾಗಿದೆ.

 

Leave a Reply

Your email address will not be published. Required fields are marked *