ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾರ್ಟ್‌ ಅನ್ನೋ ಅಡ್ಡಾದಲ್ಲಿ ಲವ್‌ ಅನ್ನೋ ಲಾಂಗ್‌ ಹಿಡಿದಿದ್ದ ಸಂತನ ಬೆಡಗಿ!

ನವದೆಹಲಿ: ಬಹುಭಾಷಾ ನಟಿ, ಶಿವರಾಜ್‌ಕುಮಾರ್‌ ಅಭಿನಯದ ಸಂತ ಚಿತ್ರದಲ್ಲಿ ನಟಿಸಿ ಹಾರ್ಟ್‌ ಅನ್ನೋ ಅಡ್ಡಾದಲ್ಲಿ ಲವ್‌ ಅನ್ನೋ ಲಾಂಗು ಹಿಡಿದು ಎಂದು ಕುಣಿದಿದ್ದ ನಟಿ ಆರ್ತಿ ಚಾಬ್ರಿಯಾ ಅವರು ಮಾರಿಷಸ್ ಮೂಲದ ಚಾರ್ಟೆಡ್ ಅಕೌಂಟೆಂಟ್ ವಿಶಾರದ್ ಬೀಡಾಸ್ಸಿ ಅವರನ್ನು ವಿವಾಹವಾಗಿದ್ದಾರೆ.

36 ವರ್ಷದ ನಟಿ ತಮ್ಮ ವಿವಾಹದ ವಿಚಾರವನ್ನು ಮಂಗಳವಾರ ಮಧ್ಯಾಹ್ನ ತಮ್ಮ ಪತಿಯೊಂದಿಗಿನ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈಗಷ್ಟೇ ವಿವಾಹವಾಗಿದ್ದೇನೆ. ದಯಮಾಡಿ ನನ್ನನ್ನು ಆಶೀರ್ವದಿಸಿ ಎಂದು ಕೆಂಪು ಬಣ್ಣದ ಲೆಹೆಂಗ ತೊಟ್ಟು ಮಿಂಚುತ್ತಿರುವ ನಟಿ ಆರ್ತಿ ಗೋಲ್ಡನ್‌ ಮತ್ತು ಮರೂನ್‌ ಬಣ್ಣದ ಶೇರ್ವಾನಿ ತೊಟ್ಟಿರುವ ಪತಿಯೊಂದಿಗಿನ ಸ್ಟನ್ನಿಂಗ್‌ ಲುಕ್‌ ಇರುವ ಫೋಟೊವನ್ನು ಪೋಸ್ಟ್‌ ಮಾಡಿದ್ದಾರೆ.

2001ರಲ್ಲಿ ‘ಲಜ್ಜಾ’ ಎಂಬ ಹಿಂದಿ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದ್ದ ಆರ್ತಿ 2005ರಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್ ಸೋದರ ಬಾಲಾಜಿ ಅಭಿನಯದ ‘ಅಹಂ ಪ್ರೇಮಾಸ್ಮಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ‘ಸಂತ’ ಸಿನಿಮಾದಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹಾರ್ಟಿಗೆ ಕನ್ನ ಹಾಕಿದ್ದರು. ಕೊನೆಯ ಬಾರಿಗೆ ಉಪೇಂದ್ರ ಅವರ ಜತೆ ‘ರಜನಿ’ಯಲ್ಲಿ ತೆರೆ ಹಂಚಿಕೊಂಡಿದ್ದ ಬ್ಯೂಟಿ ಕ್ವೀನ್‌ ಮತ್ತೆ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ.

ಹಿಂದಿ, ಕನ್ನಡ, ತೆಲುಗು ಮತ್ತು ಪಂಜಾಬಿ ಚಿತ್ರಗಳಲ್ಲಿ ಅಭಿನಯಿಸಿರುವ ಆರ್ತಿ ವೈವಾಹಿಕ ಜೀವನದ ಫೋಟೊಗಳು ಇಲ್ಲಿವೆ…

Leave a Reply

Your email address will not be published. Required fields are marked *