ಮಂಗಳೂರು : ಲೋಕಮಾತಾ ಅಹಲ್ಯಾದೇವಿ ಹೋಳ್ಕರ್ ಅವರ 300ನೇ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭ ಫೆ.15ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಮ್, ದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್, ಪುಣೆಯ ಲೇಖಕಿ ಶೆಫಾಲಿ ವೈದ್ಯ, ಸಾಮಾಜಿಕ ಕಾರ್ಯಕರ್ತ ಡಾ.ಜಯಪ್ರಕಾಶ್ ಮುಂತಾದವರು ವಿವಿಧ ಗೋಷ್ಠಿಗಳಲ್ಲಿ
ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿನಿ, ಸಾಕ್ಷಚಿತ್ರ, ನೃತ್ಯ ರೂಪಕ, ದ್ವಿಚಕ್ರ ವಾಹನ ರ‌್ಯಾಲಿ ಏರ್ಪಡಿಸಲಾಗಿದೆ ಎಂದು ವರ್ಷಾಚರಣೆ ಸಮಿತಿಯ ರಾಜ್ಯ ಸದಸ್ಯೆ ವೀಣಾ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಂದು ಸಾವಿರಕ್ಕೂ ಅಧಿಕ ಮಹಿಳೆಯರು, ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯವಾಹ ಡಾ.ಜಯಪ್ರಕಾಶ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
1725ರಲ್ಲಿ ಜನಿಸಿದ ಅಹಲ್ಯಾದೇವಿ ಹೋಳ್ಕರ್ ಅವರು ಇಂದೋರ್‌ನ ರಾಣಿಯಾಗಿ 28 ವರ್ಷ ಆಡಳಿತ ನಡೆಸಿದ್ದರು. ರಾಜಕೀಯ, ಧಾರ್ಮಿಕ, ನ್ಯಾಯಪರ, ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಶ್ರೇಷ್ಠ ಸಾಧನೆಯನ್ನು ಅವರು ಆ ಕಾಲದಲ್ಲಿ ಮಾಡಿದ್ದರು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ದೇಶಾದ್ಯಂತ ಹೋಳ್ಕರ್‌ರವರ 300ನೇ ಜನ್ಮ ವರ್ಷಾಚರಣೆ ನಡೆಯುತ್ತಿದೆ ವಿಭಾಗ ಸಂಯೋಜಕಿ ಕುಮುದಿನಿ ಶೆಣೈ ವಿವರ ನೀಡಿದರು.
ಪ್ರಾಂತ ಸಂಯೋಜಕ ರವೀಂದ್ರ ಪುತ್ತೂರು, ವ್ಯವಸ್ಥಾಪಕ ರಮೇಶ್ ಕೆ., ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕ ಡಾ.ಮಾಧವ ಎಂ..ಕೆ. ಉಪಸ್ಥಿತರಿದ್ದರು.
ಫೆ.15ರಂದು ಅಹಲ್ಯಾದೇವಿ ಹೋಳ್ಕರ್ 300ನೇ ಜನ್ಮ ವರ್ಷಾಚರಣೆಯ ಸಮಾರೋಪ

You Might Also Like
ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips
ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…
ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…
ವೇಜ್, ನಾನ್ವೆಜ್ ಖಾದ್ಯ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!
Tomato : ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು ಕರಿ, ಗ್ರೇವಿ, ಸೂಪ್…