More

    ಕೃಷಿಕರ ವೈಯಕ್ತಿಕ ಕಾಮಗಾರಿಗೆ ಆದ್ಯತೆ ನೀಡಿ- ಸಿಇಒ ರಾಹುಲ್ ಸಂಕನೂರು

    ಕುರುಗೋಡು: ನರೇಗಾ ಯೋಜನೆಯಲ್ಲಿ ರೈತರ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಸಂಕನೂರು ಸೂಚಿಸಿದರು.

    ಎಚ್.ವೀರಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಮೃತ ಸರೋವರ ಕೆರೆ ಕಾಮಗಾರಿ ವೀಕ್ಷಿಸಿ ಗುರುವಾರ ಮಾತನಾಡಿದರು. ನರೇಗಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸರೋವರ ಕೆರೆ ಗ್ರಾಮದ ಸುತ್ತಲಿನ ಜನ-ಜಾನುವಾರುಗಳಿಗೆ ಅನುಕೂಲವಾಗಲಿದ್ದು, ಅಂತರ್ಜಲಮಟ್ಟ ಹೆಚ್ಚಾಗಲಿದೆ. ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ತಡೆದು ಇಂಗಿಸುವ ಕಾರ್ಯವಾಗಬೇಕು ಎಂದರು.

    ಇದನ್ನೂ ಓದಿ: ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ವೃದ್ಧಿ: ಕೂಲಿಕಾರರ ಕೈಗೆ ಕೆಲಸ, ಗುಳೆಗೆ ಬಿತ್ತು ಬ್ರೇಕ್

    ಕೃಷಿ ಮತ್ತು ಕುಡಿಯಲು ನೀರು ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಜನರ ಸಹಭಾಗಿತ್ವದಿಂದ ಅಮೃತ ಸರೋವರ ನಿರ್ಮಾಣವಾಗುತ್ತಿದೆ. ರೈತರಿಗೆ ಹೆಚ್ಚು ಉಪಯೋಗವಾಗುವ ಬದು, ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

    ಎಡಿಸಿಪಿ ಅಂಬರೀಷ್ , ತಾಪಂ ಇಒ ಕೆ.ವಿ.ನಿರ್ಮಲಾ, ಸಹಾಯಕ ನಿರ್ದೇಶಕ ಪಿ.ಶಿವರಾಮರೆಡ್ಡಿ, ಟೆಕ್ನಿಕಲ್ ಅಸಿಸ್ಟೆಂಟ್ ಮಲ್ಲಿಕಾರ್ಜುನ, ಪಿಡಿಒ ಎ.ಮಂಜುನಾಥ, ಮುತ್ತಪ್ಪ, ರಾಘವೇಂದ್ರ, ಮಾರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts